ಕಸ ತುಂಬಿಸಿದ ಗಾಡಿಯಲ್ಲಿ ಮೋದಿ, ಆದಿತ್ಯನಾಥ್ ಫೋಟೋ: ಪೌರ ಕಾರ್ಮಿಕ ಕೆಲಸದಿಂದ ವಜಾ

Prasthutha|

ನವದೆಹಲಿ: ಕಸದೊಂದಿಗೆ ಎಸೆದಿದ್ದ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫ್ರೇಂ ಹಾಕಿದ ಫೋಟೋವನ್ನು ಇತರ ಕಸದ ರಾಶಿಯ ಜೊತೆಗೆ ಕಸದ ಗಾಡಿಯಲ್ಲಿ ತಳ್ಳಿಕೊಂಡು ಹೋದ ಪೌರ ಕಾರ್ಮಿಕನನ್ನು ಕೆಲಸದಿಂದ ವಜಾ ಮಾಡಿದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

- Advertisement -

ಪೌರಕಾರ್ಮಿಕ ಎಂದಿನಂತೆ ಕಸ ಆಯುತ್ತಿದ್ದ ಸಂದರ್ಭದಲ್ಲಿ ಕಸದೊಂದಿಗೆ ಎಸೆಯಲಾಗಿದ್ದ ಈ ಫೋಟೋಗಳು ದೊರೆತಿದ್ದು, ಅವುಗಳನ್ನೂ ಕಸ ತುಂಬಿಸಿದ್ದ ತಮ್ಮ ತಳ್ಳುಗಾಡಿಯಲ್ಲಿ ಇಟ್ಟು ತಳ್ಳಿಕೊಂಡು ಹೋಗಿದ್ದರು.

ಇದನ್ನು ಗಮನಿಸಿದ ಕೆಲ ವ್ಯಕ್ತಿಗಳು ಪೌರ ಕಾರ್ಮಿಕನ ವೀಡಿಯೋ ಮಾಡಿದ್ದು, ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.

- Advertisement -

‘ನನಗೆ ಏನು ಮಾಡಲು ಸಾಧ್ಯ?. ಈ ಫೋಟೋಗಳು ಕಸದ ರಾಶಿಯಲ್ಲಿ ಇತ್ತು. ಹಾಗಾಗಿ ನಾನು ಕಸದೊಂದಿಗೇ ಕೊಂಡಿಯ್ಯುತ್ತಿದ್ದೇನೆ ಎಂದು ಪೌರಕಾರ್ಮಿಕ ಅಸಹಾಯಕನಾಗಿ ಕೇಳುತ್ತಿರುವುದು ಸೆರೆಹಿಡಿದ ವೀಡಿಯೋ ದಲ್ಲಿ ಕಂಡುಬಂದಿದೆ.

‘ಆ ವ್ಯಕ್ತಿಯು ಅರಿವಿಲ್ಲದೇ ಈ ಫೋಟೋಗಳನ್ನು ಕಸದ ಗಾಡಿಯಲ್ಲೇ ಕೊಂಡು ಹೋಗಿದ್ದಾರೆ . ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಕೆಲಸದಿಂದ ವಜಾ ಮಾಡಲಾಗಿದೆ ಎಂದು ಮಥುರಾ- ವೃಂದಾವನ್ ನಗರ ನಿಗಮದ ಹೆಚ್ಚುವರಿ ಆಯುಕ್ತರಾದ ಸತ್ಯೇಂದ್ರ ಕುಮಾರ್ ತಿವಾರಿ ತಿಳಿಸಿದ್ದಾರೆ.

Join Whatsapp