ಕೋವಿಡ್‌ ಸಂಕಷ್ಟ | ಪಿಎಂ ಕೇರ್‌ ಗೆ 2.51 ಲಕ್ಷ ರೂ. ದೇಣಿಗೆ ನೀಡಿದ್ದ ವ್ಯಕ್ತಿಯ ತಾಯಿಗೇ ಬೆಡ್‌ ಸಿಗಲಿಲ್ಲ; ಅಮ್ಮನನ್ನು ಕಳೆದುಕೊಂಡ ವಿಜಯ್‌ ಪಾರಿಖ್‌ ಟ್ವೀಟ್‌ ವೈರಲ್‌

Prasthutha|

ಅಹಮದ್‌ ನಗರ : ಕಳೆದ ವರ್ಷ ಕೋವಿಡ್‌ ನಿಯಂತ್ರಣಕ್ಕಾಗಿ ನಿಧಿ ಸಂಗ್ರಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕರಿಂದ ಸಹಾಯ ಹಸ್ತ ಚಾಚಿ, ಪಿಎಂ ಕೇರ್‌ ನಿಧಿ ಸ್ಥಾಪಿಸಿದ್ದರು. ಸಾವಿರಾರು ಮಂದಿ  ಕೋಟ್ಯಂತರ ರೂ. ದೇಣಿಗೆಯನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದರು.

- Advertisement -

ಅಂತಹವರಲ್ಲಿ ಅಹಮದ್‌ ನಗರದ ವಿಜಯ್‌ ಪಾರಿಖ್‌ ಎಂಬವರು ಕೂಡ ಒಬ್ಬರು. ಅವರು ಪಿಎಂ ಕೇರ್‌ ನಿಧಿಗೆ 2.51 ಲಕ್ಷ ರೂ. ದೇಣಿಗೆ ನೀಡಿದ್ದರು. ಆದರೆ, ಈ ವರ್ಷದ ಕೋವಿಡ್‌ ಎರಡನೇ ಅಲೆಯ ಸಂದರ್ಭ ಸ್ವತಃ ಅವರಿಗೇ ಅವರ ತಾಯಿಗೆ ಕೊರೊನ ಪಾಸಿಟಿವ್‌ ಬಂದಾಗ ಬೆಡ್‌ ಸಿಗದಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಪ್ರಕಟಿಸಿದ್ದಾರೆ. ತಾನು ಹಣ ಪಾವತಿಸಿದ ರಶೀದಿಯನ್ನೂ ಜೊತೆಗೆ ಲಗತ್ತಿಸಿದ್ದಾರೆ.

2.51 ಲಕ್ಷ ರೂ. ದೇಣಿಗೆ ನೀಡಿಯೂ ಸಾಯುತ್ತಿರುವ ನನ್ನ ತಾಯಿಗೆ ಬೆಡ್‌ ಒದಗಿಸಲು ಸಹಾಯವಾಗಲಿಲ್ಲ. ಮೂರನೇ ಅಲೆಯ ವೇಳೆಗೆ ಬೆಡ್‌ ಕಾದಿರಿಸಲು ನಾನು ಎಷ್ಟು ದೇಣಿಗೆ ನೀಡಬೇಕೆಂಬುದನ್ನು ದಯವಿಟ್ಟು ತಿಳಿಸಿ. ಯಾಕೆಂದರೆ, ನಾನು ಇನ್ಯಾರನ್ನೂ ಕಳೆದುಕೊಳ್ಳಬಾರದು.

- Advertisement -

ಪಾರಿಖ್‌ ರ ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಟ್ವಿಟರ್‌ ನಲ್ಲಿ ಅವರ ಟ್ವೀಟ್‌ ಗೆ ಕೇವಲ ೧೫ ಗಂಟೆ ಅವಧಿಯಲ್ಲಿ 20,000 ಲೈಕ್‌ ಗಳು ಬಂದಿವೆ ಮತ್ತು 8,386 ರಿಟ್ವೀಟ್‌ ಗಳಾಗಿವೆ. ವಿಶೇಷ ಏನೆಂದರೆ, ಪಾರಿಖ್‌ ರ ಈ ಹಿಂದಿನ ಟ್ವೀಟ್‌ ಗಳನ್ನು ನೋಡಿದರೆ ಅವರೊಬ್ಬ ಬಿಜೆಪಿಯ ಕಟ್ಟಾ ಬೆಂಬಲಿಗ ಎಂಬುದು ಸ್ಪಷ್ಟವಾಗುತ್ತದೆ.

https://twitter.com/VeejayParikh/status/1396834006897815562
Join Whatsapp