ನಿಝಾಮುದ್ದೀನ್‌ ಮರ್ಕಝ್ ತೆರೆಯಲು ವಕ್ಫ್ ಬೋರ್ಡ್ ಮನವಿ| ಜಂಟಿ ಪರಿಶೀಲನೆಗೆ ಆದೇಶಿಸಿದ ದೆಹಲಿ ಹೈಕೋರ್ಟ್

Prasthutha|

ಹೊಸದಿಲ್ಲಿ: ನಿಝಾಮುದ್ದೀನ್ ಮರ್ಕಝ್ ಅನ್ನು ಪುನರಾರಂಭಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಜಂಟಿ ಪರಿಶೀಲನೆಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.

- Advertisement -

ಕೋವಿಡ್ ಸಂದರ್ಭದಲ್ಲಿ ತಬ್ಲೀಗ್ ಜಮಾಅತ್ ಸಭೆ ನಡೆಸಿದೆ ಎಂದು ಆರೋಪಿಸಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ನಿಝಾಮುದ್ದೀನ್ ಮರ್ಕಝ್ ಅನ್ನು ಮುಚ್ಚಲಾಗಿತ್ತು.
ನಿಝಾಮುದ್ದೀನ್ ಮರ್ಕಝ್ ಅನ್ನು ಮತ್ತೆ ತೆರೆಯಲು ದೆಹಲಿ ವಕ್ಫ್ ಮಂಡಳಿಯ ಮನವಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯವು ದೆಹಲಿ ಪೊಲೀಸರು ಮತ್ತು ದೆಹಲಿ ವಕ್ಫ್ ಮಂಡಳಿಯ ನೇತೃತ್ವದಲ್ಲಿ ಪರಿಶೀಲನೆ ನಡೆಸುವಂತೆ ಆದೇಶಿಸಿದೆ. ಪರಿಶೀಲನೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ದೆಹಲಿಯಲ್ಲಿ ಹೆಚ್ಚಿನ ಆರಾಧನಾಲಯಗಳು ತೆರೆದಿದ್ದರೂ ನಿಝಾಮುದ್ದೀನ್ ಮರ್ಕಝ್ ಮಾತ್ರ ಮುಚ್ಚಲ್ಪಟ್ಟಿದೆ ಎಂದು ವಕ್ಫ್ ಬೋರ್ಡ್ ನ್ಯಾಯಾಲಯಕ್ಕೆ ತಿಳಿಸಿದೆ.

Join Whatsapp