ಬೆಂಗಳೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು “ಗೃಹ ಲಕ್ಷ್ಮೀ” ಯೋಜನೆ ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿ ಸರ್ಕಾರ ಕೂಡ ಮತದಾರರನ್ನು ಸೆಳೆಯಲು ಹೊಸ ಯೋಜನೆ ಪ್ರಕಟಿಸಲು ಚಿಂತನೆ ನಡೆಸಿದೆ.
ರೈತಾಪಿ ಕೃಷಿಕರ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ಬಜೆಟ್’ನಲ್ಲಿ ಘೋಷಿಸಿದಂತೆ ” ರೈತ ಶಕ್ತಿ ಯೋಜನೆ” ಈ ತಿಂಗಳಾಂತ್ಯಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ.
ಪ್ರತಿ ಎಕರೆಗೆ ರೂ.250 ಗಳಂತೆ ಗರಿಷ್ಠ ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್’ಗೆ ಸಹಾಯಧನವನ್ನು ನೀಡುವ ” ರೈತ ಶಕ್ತಿ ” ಯೋಜನೆಯನ್ನು ಈ ತಿಂಗಳಾಂತ್ಯಕ್ಕೆ ಅನುಷ್ಠಾನಗೊಳ್ಳುತ್ತಿದ್ದು,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುಮಾರು 45 ಲಕ್ಷಕ್ಕೂ ಹೆಚ್ಚಿನ ರೈತಾಪಿ ಕುಟುಂಬಗಳಿಗೆ ಡಿಬಿಟಿ ಮೂಲಕ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಿಂಗಳಾಂತ್ಯಕ್ಕೆ “ರೈತ ಶಕ್ತಿ ಯೋಜನೆ”ಗೆ ಚಾಲನೆ ನೀಡಲು ಚಿಂತನೆ
Prasthutha|