ಪೋರ್ಚುಗಲ್ ಬೇಜಾ ಏರ್ ಶೋ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ: ಪೈಲಟ್ ಸಾವು

Prasthutha|

ದಕ್ಷಿಣ ಪೋರ್ಚುಗಲ್ ನಲ್ಲಿ ನಡೆದ ಏರ್ ಶೋ ಪ್ರದರ್ಶನದ ವೇಳೆ ಎರಡು ಸಣ್ಣ ವಿಮಾನಗಳು ಡಿಕ್ಕಿ ಹೊಡೆದು ಓರ್ವ ಪೈಲಟ್ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿದ್ದಾರೆ ಎಂದು ವಾಯುಪಡೆ ತಿಳಿಸಿದೆ.

- Advertisement -

ಆರು ವಿಮಾನಗಳನ್ನು ಒಳಗೊಂಡ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಎರಡು ವಿಮಾನಗಳು ಅಪಘಾತಕ್ಕೆ ಒಳಗಾದವು. ಪೋರ್ಚುಗಲ್ ನಲ್ಲಿ ನಡೆದ ಬೇಜಾ ಏರ್ ಶೋ ವೇಳೆ ಅಪಘಾತ ಸಂಭವಿಸಿದೆ.

ಜೂನ್ 2ರ ಭಾನುವಾರದಂದು ಎರಡು ವಿಮಾನಗಳು ಆಕಾಶದಲ್ಲಿ ಸಾಹಸ ಪ್ರದರ್ಶಿಸುತ್ತಿದ್ದವು. ಇದೇ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಅದರ ನಂತರ ವಿಮಾನ ಪತನಗೊಂಡಿತು. ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಅಪಘಾತದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



Join Whatsapp