ಹೊಸದಿಲ್ಲಿ: ಹೆಣ್ಣು ಮಕ್ಕಳಿಗೆ ಮುಟ್ಟಿನ ರಜೆ ನೀಡಲು ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.
ವಿದ್ಯಾರ್ಥಿನಿಯರು ಮತ್ತು ಉದ್ಯೋಗದಲ್ಲಿ ಇರುವ ಹೆಣ್ಣು ಮಕ್ಕಳು ಮುಟ್ಟಿನ ಕಾಲದಲ್ಲಿ ತುಂಬ ಕಷ್ಟ ಅನುಭವಿಸುವುದರಿಂದಾಗಿ ಅವರಿಗೆ ರಜೆ ನೀಡುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿಯ ಅರ್ಜಿ) ಸಲ್ಲಿಸಿಲಾಗಿದೆ.
ಲಂಡನ್ ವಿಶ್ವವಿದ್ಯಾನಿಲಯದ ಕಾಲೇಜು ಇತ್ತೀಚೆಗೆ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿ ಶೈಲೇಂದ್ರ ಮಣಿ ತ್ರಿಪಾಠಿ ಅರ್ಜಿ ಸಲ್ಲಿಸಿದ್ದಾರೆ.
ಮುಟ್ಟಿನ ಕಾಲದಲ್ಲಿ ಹೆಣ್ಣು ಮಕ್ಕಳು ತೀವ್ರ ಸ್ವರೂಪದ ನೋವನ್ನು ಅನುಭವಿಸುತ್ತಾರೆ. ಕೆಲವರು ಹೃದಯಾಘಾತದ ಕಾಲದ ನೋವನ್ನು ಅನುಭವಿಸುತ್ತಾರೆ. ಆ ಅವಧಿಯಲ್ಲಿ ಅವರಿಗೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ ಮಾತೃಭೂಮಿ, ಸ್ವಿಗ್ಗಿಯಂತಾ ಒಂದೆರಡು ಸಂಸ್ಥೆಗಳು ಮಾತ್ರ ಮುಟ್ಟಿನ ಕಾಲದ ಸಂಬಳ ಸಹಿತ ರಜೆ ನೀಡುತ್ತಿವೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.