ತಂದೆಯ ಶವಪೆಟ್ಟಿಗೆಯ ಎದುರು ಫೋಟೋಶೂಟ್ | ನೆಟ್ಟಿಗರ ರಿಯಾಕ್ಷನ್’ಗೆ ಬೆದರಿ ಡಿಲೀಟ್

Prasthutha|

ಫ್ಲೋರಿಡಾ: ಅತ್ಯಾಪ್ತರ ಅಗಲುವಿಕೆ ಜೀವನದುದ್ದಕ್ಕೂ ಎಲ್ಲರನ್ನೂ ಕಾಡುತ್ತಿರುತ್ತದೆ. ಆದರೆ ಅಮೆರಿಕದ ಫ್ಲೋರಿಡಾದಲ್ಲಿನ ಮಾಡೆಲ್ ಒಬ್ಬಾಕೆ ತನ್ನ ತಂದೆ ತೀರಿಹೋದ ಬಳಿಕ ತಂದೆಯ ಮೃತದೇಹವಿದ್ದ ಶವಪೆಟ್ಟಿಗೆಯ ಎದುರೇ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ ಈ ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾಳೆ.

- Advertisement -


ಫ್ಲೋರಿಡಾದ ಮಿಯಾಮಿಯಾದ ಫಿಟ್ನೆಸ್ ಮಾಡೆಲ್ ಜೊತೆಗೆ ಸೋಷಿಯಲ್ ಮೀಡಿಯಾ ಇನ್’ಫ್ಲುವೆನ್ಸರ್ ಆಗಿರುವ ಜೇನ್ ರಿವೆರಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ “ಸುಪುತ್ರಿ”. ತನ್ನ ತಂದೆ ಮೃತಪಟ್ಟಿರುವ ವಿಷಯವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದ 20 ವರ್ಷದ ಮಾಡೆಲ್, ತಂದೆಯ ಶವ ಪೆಟ್ಟಿಗೆಯ ಎದುರು ನಿಂತು ನಗುತ್ತಲೇ ವಿವಿಧ ಭಂಗಿಗಳಲ್ಲಿ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳನ್ನು ಶೇರ್ ಮಾಡಿದ್ದಳು. ಫೋಟೋದ ಕೆಳಗಡೆ “ಚಿಟ್ಟೆಯು ದೂರ ಹಾರಿಹೋಗಿದೆ. RIPಪಪ್ಪಿ, ನೀವು ನನ್ನ ಆತ್ಮೀಯ ಗೆಳೆಯನಾಗಿದ್ದಿರಿ, ಉತ್ತಮ ಜೀವನ ನಡೆಸಿದ್ದೀರಿ ಎಂದು ಬರೆದುಕೊಂಡಿದ್ದಳು.

- Advertisement -
  • https://twitter.com/myronmy9/status/1452972020241559557


ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳನ್ನು ನೋಡುತ್ತಲೇ ಜೇನ್ ರಿವೆರಾ ಅಭಿಮಾನಿಗಳು ಆಕೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಮಾಡೆಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಆಕೆಯ ಫಾಲೋವರ್ಸ್, ಎಲ್ಲರ ಕ್ಷಮೆ ಕೇಳುವಂತೆ ಆಕೆಯನ್ನ ಒತ್ತಾಯಿಸಿದ್ದಾರೆ. ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಲೇ ಮಾಡೆಲ್ ರಿವೆರಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಆಕೆ ತನ್ನ ಪೋಸ್ಟ್ ಡಿಲೀಟ್ ಮಾಡುವುದಕ್ಕೂ ಮೊದಲೇ ಹಲವಾರು ಮಂದಿ ಸ್ಕ್ರೀನ್ ಶಾಟ್ ತೆಗೆದಿದ್ದು, ಇದು ಈಗ ಮತ್ತಷ್ಟು ವೈರಲ್ ಆಗಿದೆ.



Join Whatsapp