RSS ಸಮಾವೇಶದಲ್ಲಿ ಲಾಠಿ ಹಿಡಿದ ಪ್ರಾಧ್ಯಾಪಕರ ಫೋಟೋ ವೈರಲ್; ವ್ಯಾಪಕ ಆಕ್ರೋಶ

Prasthutha|

ಕಲಬುರಗಿ: ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಮೂವರು ಸಹಾಯಕ ಪ್ರಾಧ್ಯಾಪಕರ ಆರೆಸ್ಸೆಸ್ ಗಣವೇಷಧಾರಿಗಳಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋ ವೈರಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ವಿದ್ಯಾರ್ಥಿಯೊಬ್ಬರ ಜತೆ ಸಹಾಯಕ ಪ್ರಾಧ್ಯಾಪಕರಾದ ಸಾರ್ವಜನಿಕ ಆಡಳಿತ ವಿಭಾಗದ ಡಾ.ಅಲೋಕ್ ಕುಮಾರ್ ಗೌರವ್, ಮನಶಾಸ್ತ್ರದ ವಿಭಾಗದ ಡಾ.ವಿಜಯೇಂದ್ರ ಪಾಂಡೆ ಮತ್ತು ಜೀವ ವಿಜ್ಞಾನ ವಿಭಾಗದ ಡಾ.ರಾಕೇಶ್ ಕುಮಾರ್ ಅವರು ಚಿತ್ರ ಕ್ಲಿಕ್ಕಿಸಿಕೊಂಡ ಚಿತ್ರ ವೈರಲ್ ಆಗಿದೆ. ಇದು ವಿಶ್ವವಿದ್ಯಾಲಯದ ಆವರಣದಲ್ಲಿ ಈಚೆಗೆ ಕ್ಲಿಕ್ಕಿಸಿದ ಚಿತ್ರ ಎನ್ನಲಾಗುತ್ತಿದೆ.

ಸಹಾಯಕ ಪ್ರಾಧ್ಯಾಪಕರು ಜೊತೆ ಗುರುತಿಸಿಕೊಳ್ಳಬಾರದು ಎಂಬ ‘ವಿಶ್ವವಿದ್ಯಾಲಯದ ಗಮನಕ್ಕೆ ತಾರದೇ ಬೋಧನೆ ಮತ್ತು ಸಂಶೋಧನೆಗೆ ಹೊರತುಪಡಿಸಿ ಇತರೆ ಚಟುವಟಿಕೆಗಳಲ್ಲಿ ಬೋಧಕ ವರ್ಗವು ತೊಡಗಬಾರದು ಮತ್ತು ವಿಶ್ವ ವಿದ್ಯಾಲಯದ ನೌಕರರು ಯಾವ ಸಂಘಟನೆ ಜೊತೆಯೂ ಗುರುತಿಸಿಕೊಳ್ಳಬಾರದು ಎಂಬ ನಿಯಮವಿದೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಬಸವರಾಜ ಡೋಣುರ ತಿಳಿಸಿದ್ದಾರೆ.  



Join Whatsapp