ಅಸ್ಸಾಂ ಪೊಲೀಸರ ಗುಂಡೇಟಿಗೆ ಬಲಿಯಾದ ನಾಗರಿಕನಿಗೆ ಥಳಿಸಿ ಕ್ರೌರ್ಯ ಮೆರೆದ ಪತ್ರಕರ್ತನ ಬಂಧನ

Prasthutha|

ಅಸ್ಸಾಂ: ಮನೆ ತೆರವನ್ನು ವಿರೋಧಿಸಿ ಪ್ರತಿಭಟಿಸಿದ ನಾಗರಿಕರ ಮೇಲೆ ಗುಂಡು ಹಾರಿಸಿದ ಅಸ್ಸಾಂ ಪೊಲೀಸರ ವಿರುಧ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಅಲ್ಲದೇ ಅಮಾನವೀಯ ಗುಂಡೇಟಿಗೆ ಬಲಿಯಾಗಿದ್ದ ನಾಗರಿಕನ ಮೇಲೆ ಎರಗಿ ಥಳಿಸಿದ್ದ ಪತ್ರಕರ್ತ ಫೋಟೋಗ್ರಾಫರ್ ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ನಾಗರಿಕನಿಗೆ ತೀವ್ರವಾಗಿ ಥಳಿಸಿದ್ದ ಪತ್ರಕರ್ತನನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹವೂ ಹೆಚ್ಚಾಗಿತ್ತು.

- Advertisement -

ಬಂಧಿತ ಪತ್ರಕರ್ತನನ್ನು ಅಸ್ಸಾಂ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟಿನ ಬಿಜೋಯ್ ಬೋನಿಯಾ ಎಂದು ಗುರುತಿಸಲಾಗಿದ್ದು, ಪೊಲೀಸರು ದಾಖಲಿಸಿರುವುದಾಗಿ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಮಾಹಿತಿ ನೀಡಿದ್ದಾರೆ.

ಪ್ರತಿಭಟನೆಯ ವೇಳೆ ಕೈಯಲ್ಲಿ ಕೋಲು ಹಿಡಿದು ಪೊಲೀಸರ ಬಳಿ ಬಂದಿದ್ದ ವ್ಯಕ್ತಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಅಲ್ಲದೇ ಗುಂಡೇಟಿಗೆ ಅಲ್ಲೇ ಕುಸಿದು ಮೃತಪಟ್ಟ ವ್ಯಕ್ತಿಯನ್ನು ಪೊಲೀಸರು ಸುತ್ತುವರಿದು ಹಲ್ಲೆ ನಡೆಸಿದ ದೃಶ್ಯ ವೈರಲ್ ಆಗಿತ್ತು. ಪೊಲೀಸರೊಂದಿಗೆ ಸೇರಿ ಪತ್ರಕರ್ತ ಫೋಟೊಗ್ರಾಫರ್ ಮೃತ ವ್ಯಕ್ತಿಯ ಮೇಲೆ ಮನಬಂದಂತೆ ಥಳಿಸಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.



Join Whatsapp