ಬೈಕ್ ಗೆ ಲಾರಿ ಡಿಕ್ಕಿ: ಫಾರ್ಮಸಿಸ್ಟ್ ವಿದ್ಯಾರ್ಥಿ ಮೃತ್ಯು

Prasthutha|

ಬೆಂಗಳೂರು: ಏಕಮುಖ ಸಂಚಾರದ ವಿರುದ್ಧ ದಿಕ್ಕಿನಲ್ಲಿ ಬೈಕ್ ನಲ್ಲಿ ಬಂದ ಫಾರ್ಮಸಿಸ್ಟ್ ವಿದ್ಯಾರ್ಥಿಯೊಬ್ಬ ಲಾರಿಗೆ ಡಿಕ್ಕಿ ಹೊಡೆದಾಗ ಬೆಂಕಿ ಉಂಟಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ನಸುಕಿನಲ್ಲಿ ಸದಾಶಿವನಗರದ ಶೆಲ್ ಪೆಟ್ರೊಲ್ ಬಂಕ್ ಬಳಿ ಸಂಭವಿಸಿದೆ.

- Advertisement -

ತ್ರಿಪುರ ಮೂಲದ ಕನಕನಗರದ ಡಿ ಫಾರ್ಮ ವಿದ್ಯಾರ್ಥಿ ಸುಮನ್ ಬಾನಿಕ್ (22) ಮೃತಪಟ್ಟವರು. ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಲಾರಿ ಹಾಗೂ ಬೈಕ್ ನಡುವಿನ ಅಪಘಾತ ದೃಶ್ಯ ಭಯಾನಕವಾಗಿದೆ.

- Advertisement -

ಸುಮಾರು 300 ಮೀಟರ್ ದೂರಕ್ಕೆ ಬೈಕ್ ಅನ್ನು ಲಾರಿ ಎಳೆದುಕೊಂಡು ಹೋಗಿದೆ. ಬೈಕ್ ಲಾರಿಗೆ ಸಿಲುಕಿಕೊಂಡಾಗ ಸ್ಪಾರ್ಕ್ ಆಗಿ ಲಾರಿಗೂ ಬೆಂಕಿ ಹತ್ತಿಕೊಂಡಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸಿದ್ದು, ಅಪಘಾತದ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸದಾಶಿವನಗರ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಸುಟ್ಟು ಹೋದ ವಾಹನಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp