ನ್ಯೂಯಾರ್ಕ್: ಔಷಧ ಕಂಪನಿಗಳಾದ ಫೈಝರ್ ಮತ್ತು ಬಯೋ-ಎನ್‌ಟೆಕ್, ಆರು ತಿಂಗಳಿಂದ ಐದು ವರ್ಷದೊಳಗಿನ ಮಕ್ಕಳಿಗೆ COVID-19 ಲಸಿಕೆ ನೀಡಲು ತುರ್ತು ಅನುಮತಿ ಕೋರಿ ಅರ್ಜಿ ಸಲ್ಲಿವೆ.
ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA)ಯ ವಿನಂತಿ ಮೇರೆಗೆ ಫೈಝರ್ , ಬಯೋಎನ್‌ಟೆಕ್ ಕಂಪನಿಗಳು COVID-19 ಲಸಿಕೆಯ ತುರ್ತು ಬಳಕೆಯ ಅಧಿಕಾರ (EUA) ಪಡೆಯಲು ಬೇಕಾದ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.
ಅಮೆರಿಕದ ಔಷಧ ನಿಯಂತ್ರಣ ಮಂಡಳಿ ದೃಢೀಕರಣ ನೀಡಿದರೆ, ಫೈಜರ್- ಬಯೋ ಎನ್‌ಟೆಕ್ ಲಸಿಕೆಯು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲು ಸಿದ್ಧವಾದ ಮೊದಲ COVID-19 ಲಸಿಕೆಯಾಗಲಿದೆ.