ಮುಸ್ಲಿಮರ ಮೇಲೆ ಪೊಲೀಸರ ತಾರತಮ್ಯ ನೀತಿ ಖಂಡಿಸಿ PFI ಕಾರ್ಯಕರ್ತರಿಂದ ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ; ಅಶ್ರುವಾಯ ಪ್ರಯೋಗ

Prasthutha|

ತಿರುವನಂತಪುರಂ: ಆರೆಸ್ಸೆಸ್ ವಿರುದ್ಧ ಘೋಷಣೆ ಕೂಗಿದ ನೆಪದಲ್ಲಿ PFI ಕಾರ್ಯಕರ್ತರನ್ನು ಗುರಿಯಾಗಿಸಿದ ಕೇರಳ ಪೊಲೀಸರ ತಾರತಮ್ಯ ನೀತಿ ಮತ್ತು ಬಂಧನವನ್ನು ಖಂಡಿಸಿ ಸೋಮವಾರ ಮುಖ್ಯಮಂತ್ರಿ ನಿವಾಸಕ್ಕೆ ಪಿಎಫ್ ಐ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

- Advertisement -

ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರ ಮೇಲೆ ಆರಂಭದಲ್ಲಿ ಜಲಫಿರಂಗಿ ಪ್ರಯೋಗಿಸಿದ ಪೊಲೀಸರು, ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ ಹಲವು PFI ಕಾರ್ಯಕರ್ತರು ಮತ್ತು ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.

ಇತ್ತೀಚೆಗೆ PFI ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಾಲಕನೊಬ್ಬ ಆರೆಸ್ಸೆಸ್ ವಿರುದ್ಧ ಘೋಷಣೆ ಕೂಗಿದ್ದ. ಇದನ್ನೇ ನೆಪವಾಗಿಸಿದ ಪೊಲೀಸರು PFI ಸಂಘಟನೆಯ ಹಲವು ಮುಖಂಡರನ್ನು ಬಂಧಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ನಿವಾಸಕ್ಕೆ ಪಿಎಫ್ ಐ ಜಾಥಾ ಹಮ್ಮಿಕೊಂಡಿತ್ತು.



Join Whatsapp