ಸುಳ್ಯದ ಕಳಂಜದಲ್ಲಿ ಮುಸ್ಲಿಂ ಯುವಕನ ಕೊಲೆ ಯತ್ನ: ಸಂಘಪರಿವಾರದ ದುಷ್ಕರ್ಮಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಬಂಧಿಸಲು ಪಿಎಫ್ ಐ ಆಗ್ರಹ

Prasthutha|

ಪುತ್ತೂರು: ಸುಳ್ಯ ತಾಲ್ಲೂಕಿನ ಕಳಂಜದಲ್ಲಿ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಟ ನಡೆದು ನಂತರ ರಾಜಿ ಪಂಚಾತಿಗೆಂದು ಕರೆಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಪೋಲಿಸ್ ಇಲಾಖೆ ಕೊಲೆಯತ್ನ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಕೆಮ್ಮಾಯಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

- Advertisement -


ಸುಳ್ಯ ತಾಲೂಕಿನಲ್ಲಿ ಹಿಂದು-ಮುಸ್ಲಿಮರು ಹಲವಾರು ಸಮಯಗಳಿಂದ ಶಾಂತಿ, ಸೌಹಾರ್ದತೆ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕೋಮು ಧ್ರುವೀಕರಣವೆ ತಮ್ಮ ಸಿದ್ಧಾಂತದ ಪ್ರಮುಖ ಅಸ್ತ್ರವಾಗಿಸಿರುವ ಸಂಘಪರಿವಾರ ಇದನ್ನು ಸಹಿಸದೆ ಹಲವಾರು ಸಮಯಗಳಿಂದ ಅಶಾಂತಿ, ಗಲಭೆ ಸೃಷ್ಟಿಸಲು ಹುನ್ನಾರ ನಡೆಸುತ್ತಲೇ ಇತ್ತು. ಅದರ ಮುಂದುವರಿದ ಭಾಗವಾಗಿ ನಿನ್ನೆ ತಡ ರಾತ್ರಿ ಸಂಘಪರಿವಾರದ ಕಾರ್ಯಕರ್ತನೇ ಮೊದಲಿಗೆ ಕ್ಷುಲ್ಲಕ ಸಮಸ್ಯೆ ಉಂಟು ಮಾಡಿ ಅಶಾಂತಿ ಸೃಷ್ಟಿಸಿ ನಂತರ ಹೊರಗಿನಿಂದ ಸಂಘಪರಿವಾರದ ಗೂಂಡಾಗಳನ್ನು ಕರೆಸಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿ ಕೊಲೆಯತ್ನ ನಡೆಸಿರುವುದನ್ನು ಕಾಣುವಾಗ ಇದು ಆಕಸ್ಮಿಕ ಘಟನೆ ಅಲ್ಲ ಬದಲಿಗೆ ಇದು ಪೂರ್ವ ಯೋಜಿತ ಕೃತ್ಯವೆಂದು ಭಾಸವಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.


ಪೋಲಿಸರು ಕೂಡಲೇ ಸಂಘಪರಿವಾರದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಶಾಂತಿಯುತವಾಗಿರುವ ಸುಳ್ಯ ತಾಲ್ಲೂಕಿನಲ್ಲಿ ಅಶಾಂತಿ ತಲೆದೋರಲು ಸಂಘಪರಿವಾರದ ಗೂಂಡಗಳಿಗೆ ಅವಕಾಶ ಮಾಡಿಕೊಡಬಾರದೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ

Join Whatsapp