ಅಸ್ಸಾಂ ಪ್ರತಿಭಟನಕಾರರ ಮೇಲೆ ಪೊಲೀಸರ ಗುಂಡಿನ ದಾಳಿಗೆ ಪಾಪ್ಯುಲರ್ ಫ್ರಂಟ್ ತೀವ್ರ ಖಂಡನೆ

Prasthutha|

► ತೆರವು ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಲು ಒತ್ತಾಯ

- Advertisement -


ನವದೆಹಲಿ:
ಅಸ್ಸಾಂನಲ್ಲಿ ಬಲವಂತದ ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟಿಸಿದ ನಿರಾಯುಧ ಜನರ ಹತ್ಯೆ ಮತ್ತು ಪೊಲೀಸರ ದೌರ್ಜನ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿಕೆಯೊಂದರಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.


ಅಸ್ಸಾಂನಿಂದ ಇಂದು ಹೊರ ಬಂದ ವಿಡಿಯೋ ದೃಶ್ಯಾವಳಿಗಳು ನಮ್ಮನ್ನು ತತ್ತರಿಸುವಂತೆ ಮಾಡಿದೆ. ಪೊಲೀಸರು ಯಾವುದೇ ಎಚ್ಚರಿಕೆ ನೀಡದೇ, ಮಹಿಳೆಯರು ಮತ್ತು ಮಕ್ಕಳ ಸಹಿತ ಸಾವಿರಾರು ಜನರ ಮೇಲೆ ಗುಂಡಿನ ದಾಳಿ ನಡೆಸಿರುವುದು ಕಂಡು ಬಂದಿದೆ. ಪೊಲೀಸ್ ಸಿಬ್ಬಂದಿಯ ನಡುವೆ ಸಿಲುಕಿಕೊಂಡ ವ್ಯಕ್ತಿಯೊಬ್ಬರು ಬರ್ಬರ ಹತ್ಯೆಗೊಳಗಾಗಿದ್ದು, ಮಾಧ್ಯಮದ ವ್ಯಕ್ತಿಯೊಬ್ಬನೂ ಈ ಬರ್ಬರತೆಯನ್ನು ಸಂಭ್ರಮಿಸಿದ್ದು ಕಾಣಲಾಯಿತು. ವರದಿಗಳು ಸೂಚಿಸಿರುವ ಪ್ರಕಾರ ಸಾವು – ನೋವುಗಳ ವಾಸ್ತವಿಕ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಹತ್ಯೆಗೀಡಾದ ಮೂವರಲ್ಲಿ ಓರ್ವ ಅಪ್ರಾಪ್ತನೂ ಸೇರಿದ್ದಾನೆ ಎಂದು ತೋರುತ್ತದೆ ಎಂದು ಒ.ಎಂ.ಎ.ಸಲಾಂ ಹೇಳಿದ್ದಾರೆ.

Join Whatsapp