ಶ್ರೀಲಂಕಾ ಬಿಕ್ಕಟ್ಟು: ಒಂದೇ ದಿನದಲ್ಲಿ ಪೆಟ್ರೋಲ್ ಬೆಲೆ 84 ರೂ.ಏರಿಕೆ; ಪ್ರತಿಭಟಿಸಿದ ಜನರಿಗೆ ಗುಂಡೇಟು !

Prasthutha|

ಕೊಲಂಬೋ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಕಂಗೆಟ್ಟಿದ್ದ ಲಂಕಾ ಜನತೆಗೆ ಇಂಧನ ಬೆಲೆ ಏರಿಕೆ ಮತ್ತೆ ಶಾಕ್ ನೀಡಿದೆ. ಒಂದೇ ದಿನದಲ್ಲಿ ಪೆಟ್ರೋಲ್ ಬೆಲೆ ಬರೋಬ್ಬರಿ 84ರೂ.ರಷ್ಟು ಏರಿಕೆಯಾಗಿದೆ.

- Advertisement -

ಪೆಟ್ರೋಲ್ ಬೆಲೆ 84ರೂ. ಏರಿಕೆಯೊಂದಿಗೆ ಒಂದು ಲೀಟರ್ ಪೆಟ್ರೋಲ್ ಬೆಲೆ 338 ರೂ.ಗೆ ಜಿಗಿದಿದೆ. ಇದೇ ವೇಳೆ ಸರಕಾರದ ವಿರುದ್ಧ ಲಂಕನ್ನೀಯರು ದಂಗೆ ಎದ್ದಿದ್ದು, ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಮಧ್ಯೆ ಪೊಲೀಸರು ಹಾಗೂ ಜನರ ನಡುವೆ ಘರ್ಷಣೆ ನಡೆದಿದ್ದು, , ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 12 ಮಂದಿಗೆ ಗಾಯಗೊಂಡಿದ್ದಾರೆ.

ರಂಬುಕ್ಕನದಲ್ಲಿ ರೈಲು ಮಾರ್ಗದ ಬಳಿ ಪ್ರತಿಭಟನೆ ನಡೆಸಿದ್ದ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಘರ್ಷಣೆ ನಡೆದಿದೆ.ಪ್ರತಿಭಟನಕಾರರು ವಾಹನಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗದೇ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Join Whatsapp