ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ !

Prasthutha|

ನವದೆಹಲಿ:  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಂಗಳವಾರ ದೇಶಾದ್ಯಂತ 80 ಪೈಸೆ ಏರಿಕೆಯಾಗಿದೆ.

- Advertisement -

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 96 ರೂಪಾಯಿ 21 ಪೈಸೆಯಾಗಿದೆ. ಈ ಹಿಂದೆ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 95 ರೂಪಾಯಿ 41 ಪೈಸೆಯಾಗಿತ್ತು. ಡೀಸೆಲ್ ಬೆಲೆ 86 ರೂಪಾಯಿ 67 ಪೈಸೆಯಿಂದ 87 ರೂಪಾಯಿ 47 ಪೈಸೆಗೆ ಹೆಚ್ಚಳವಾಗಿದೆ.

ಅಲ್ಲದೆ, ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್ ಗೆ 50 ರೂಪಾಯಿ ಹೆಚ್ಚಳವಾಗಿದೆ.

- Advertisement -

ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿತ್ತು. ಚುನಾವಣಾ ಫಲಿತಾಂಶದ ಬಳಿಕ ಮತ್ತೆ ಹೆಚ್ಚಿಸಿದೆ.

Join Whatsapp