ಬಿಜೆಪಿ ಆಡಳಿತದ ಮ.ಪ್ರ.ದಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿತು! | ಸಾಮಾನ್ಯ ಪೆಟ್ರೋಲ್ 100 ರ ಗಡಿ ತಲುಪಲು 50 ಪೈಸೆ ಮಾತ್ರ ಬಾಕಿ!

Prasthutha|

ಬಿಜೆಪಿ ಆಡಳಿತದ ಮ.ಪ್ರ.ದಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿತು! | ಸಾಮಾನ್ಯ ಪೆಟ್ರೋಲ್ 100 ರ ಗಡಿ ತಲುಪಲು 50 ಪೈಸೆ ಮಾತ್ರ ಬಾಕಿ!

- Advertisement -

ಮಂಗಳೂರು : ‘ಅಚ್ಛೇ ದಿನ್’ ತರುವುದಾಗಿ ಭರವಸೆ ನೀಡಿದ ಅಧಿಕಾರಕ್ಕೆ ಬಂದ ಬಿಜೆಪಿಗೆ ಈಗ ಕನಿಷ್ಠಪಕ್ಷ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣವೂ ಸಾಧ್ಯವಾಗುತ್ತಿಲ್ಲ. ಬಿಜೆಪಿ ಆಡಳಿತದ ಮಧ್ಯಪ್ರದೇಶದ ಅನುಪುರದಲ್ಲಿ ಇಂದಿನ ಸಾಮಾನ್ಯ ಪೆಟ್ರೋಲ್ ಬೆಲೆ ಲೀಟರ್ ಗೆ 99.46 ರೂ. ಆಗಿದ್ದು, 100 ಗಡಿ ದಾಟಲು ಕೇವಲ 54 ಪೈಸೆ ಬಾಕಿಯಿದೆಯಷ್ಟೇ.

ಇನ್ನೊಂದೆಡೆ ಮಧ್ಯಪ್ರದೇಶದಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ ಈಗಾಗಲೇ 100 ರೂ. ಗಡಿ ದಾಟಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಶನಿವಾರ 100 ರೂ. ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ, ವಾಹನ ಚಾಲಕರೊಬ್ಬರು ಕ್ರಿಕೆಟಿಗರು ಶತಕ ಬಾರಿಸಿದಾಗ ಹೆಲ್ಮೆಟ್ ತೆಗೆದು, ಬ್ಯಾಟ್ ಪ್ರದರ್ಶಿಸುವ ಮಾದರಿಯಲ್ಲಿ, ಪೆಟ್ರೋಲ್ ಪಂಪ್ ನಲ್ಲಿ ತೆಗೆಸಿಕೊಂಡಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -

ಭೋಪಾಲ್ ನಲ್ಲಿ ಇಂದು ಸಾಮಾನ್ಯ ಪಟ್ರೋಲ್ ಬೆಲೆ ಲೀಟರ್ ಗೆ 96.96 ರೂ. ಇದೆ. ಶನಿವಾರ ಇಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ ಲೀಟರ್ ಗೆ 100.04 ರೂ. ಆಗಿತ್ತು. ಆ ಪ್ರಕಾರ, ಇಂದು ಅದರ ಬೆಲೆ ಇನ್ನೂ ಹೆಚ್ಚಾಗಿರುತ್ತದೆ. ಇನ್ನೊಂದೆಡೆ, ಮಧ್ಯಪ್ರದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 99 ರೂ. ಗಡಿ ದಾಟಿದೆ. ಹಾಗಿದ್ದರೆ, ಅಲ್ಲಿನ ಬಹುತೇಕ ನಗರಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ. ದಾಟಿದೆ. ಆ ರಾಜ್ಯದ ಉಳಿದ ನಗರಗಳ ಪ್ರೀಮಿಯಂ ಪೆಟ್ರೋಲ್ ಬೆಲೆ ಎಷ್ಟು ಎಂಬುದು ತಿಳಿದುಬಂದಿಲ್ಲ.

ಮಧ್ಯಪ್ರದೇಶದ ಹಳೆ ಪೆಟ್ರೋಲ್ ಪಂಪ್ ಗಳಲ್ಲಿ ಪೆಟ್ರೋಲ್ ಬೆಲೆ ಪ್ರದರ್ಶಿಸುವ ಪಟ್ಟಿಯಲ್ಲಿ ಮೂರು ಅಂಕಿಗಳ ದರಕ್ಕೆ ಅವಕಾಶವಿಲ್ಲದಿರುವುದರಿಂದ, ಬಹುತೇಕ ಪೆಟ್ರೋಲ್ ಪಂಪ್ ಗಳು ಪೇಚಾಡುವಂತಾಗಿದೆ. ಹಳೆ ಪೆಟ್ರೋಲ್ ಪಂಪ್ ಗಳಲ್ಲಿ ಎರಡಂಕಿಯ ದರ ಪ್ರದರ್ಶಿಸಲು ಮಾತ್ರ ಅವಕಾಶವಿದೆ. ಇವುಗಳನ್ನು ತಯಾರಿಸುವಾಗ ಮುಂದೆ ಪೆಟ್ರೋಲ್ ದರ 100 ರೂ. ಗಡಿ ದಾಟ ಬಹುದೆಂಬ ಕಲ್ಪನೆಯಿರಲಿಲ್ಲ ಎನಿಸುತ್ತಿದೆ.

ಇನ್ನು ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ ಲೀಟರ್ ಗೆ 91.95 ರೂ., ಮುಂಬೈಯಲ್ಲಿ 95.44 ರೂ ಆಗಿದೆ.



Join Whatsapp