ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ 93 ರೂ., ರಾವಣನ ಲಂಕಾದಲ್ಲಿ 51 ರೂ.! : ಕೇಂದ್ರಕ್ಕೆ ಸುಬ್ರಮಣಿಯನ್ ಸ್ವಾಮಿ ಚಾಟಿ

Prasthutha|

ನವದೆಹಲಿ : ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಈ ಬಗ್ಗೆ ವಿರೋಧ ಪಕ್ಷಗಳ ಮುಖಂಡರು ಪ್ರತಿಕ್ರಿಯಿಸಬೇಕಾಗಿತ್ತು. ಆದರೆ, ಸಂಸದ ಸುಬ್ರಮಣಿಯನ್ ಬಿಜೆಪಿಯವರಾಗಿದ್ದೂ, ಇಂಧನ ಬೆಲೆ ಏರಿಕೆಗೆ ಸರಕಾರಕ್ಕೆ ಸರಿಯಾದ ಚಾಟಿ ಬೀಸಿದ್ದಾರೆ.

- Advertisement -

“ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ 93 ರೂ., ಸೀತಾಳ ನೇಪಾಳದಲ್ಲಿ 53 ರೂ., ರಾವಣನ ಲಂಕಾದಲ್ಲಿ 51 ರೂ.” ಎಂಬುದಾಗಿ ಸುಬ್ರಮಣಿಯನ್ ಟ್ವೀಟ್ ಮಾಡಿದ್ದಾರೆ.

ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 93 ದಾಟಿದೆ. ಮಧ್ಯಪ್ರದೇಶದ ಕೆಲವು ನಗರಗಳಲ್ಲಿ ಪೆಟ್ರೋಲ್ ಗೆ ಲೀಟರ್ ಗೆ 97ರ ಗಡಿ ದಾಟಿದೆ. ರಾಜಸ್ಥಾನದಲ್ಲಿ ಪ್ರೀಮಿಯಮ್ ಪೆಟ್ರೋಲ್ ಗೆ ಲೀಟರ್ ಗೆ 100 ರೂ. ಗಡಿ ದಾಟಿದೆ.

Join Whatsapp