ಅಚ್ಛೇ ದಿನ್! : ಮಧ್ಯಪ್ರದೇಶ, ರಾಜಸ್ಥಾನ ನಗರಗಳಲ್ಲಿ ಪೆಟ್ರೋಲ್‌ ಬೆಲೆ 108 ರೂ., ಡೀಸೆಲ್‌ ಬೆಲೆ 101 ರೂ.!

Prasthutha|

ನವದೆಹಲಿ : ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಭಾನುವಾರ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಗೆ 108 ರೂ. ದಾಟಿದೆ. ಅಲ್ಲದೆ, ರಾಜಸ್ಥಾನದಲ್ಲಿ ಡೀಸೆಲ್‌ ಬೆಲೆ ಕೂಡ 101 ರೂ. ದಾಟಿದೆ.

- Advertisement -

ರಾಜಸ್ಥಾನದ ಗಂಗಾ ನಗರದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಗೆ 108.37 ರೂ. ಆಗಿದೆ. ಡೀಸೆಲ್‌ ಬೆಲೆ ಲೀಟರ್‌ ಗೆ 101.12 ರೂ. ಆಗಿದೆ. ಮಧ್ಯಪ್ರದೇಶದ ಶಾದೊಲ್‌ ನಲ್ಲಿ ಪೆಟ್ರೋಲ್‌ ಗೆ ಲೀಟರ್‌ ಗೆ 108.04 ರೂ., ರೇವಾದಲ್ಲಿ 108.19 ರೂ. ಆಗಿದೆ.

ಹಲವು ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿದೆ. ಸಾಮಾನ್ಯವಾಗಿ ರಾಜ್ಯ ರಾಜಧಾನಿಗಳ ಪೆಟ್ರೋಲ್‌ ದರ ಮಾತ್ರ ಮುಖ್ಯವಾಹಿನಿ ಮಾಧ್ಯಮ ವರದಿಗಳು ಗಮನ ಹರಿಸುತ್ತವೆ. ಆದರೆ, ರಾಜ್ಯಗಳ ವಿವಿಧ ನಗರಗಳಲ್ಲಿ 100 ರೂ. ಗಡಿ ದಾಟಿದ ಹಲವು ದಿನಗಳಾಗಿವೆ. ಕರ್ನಾಟಕದಲ್ಲೇ ಬಹುತೇಕ ನಗರಗಳಲ್ಲಿ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿದೆ.

- Advertisement -

ಈ ನಡುವೆ ಕರ್ನಾಟಕದಲ್ಲಿ ಬೆಂಗಳೂರಿನಲ್ಲೂ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿದ್ದು, ಲೀಟರ್‌ ಗೆ 100.47 ರೂ. ಆಗಿದೆ. ಡೀಸೆಲ್‌ ಬೆಲೆ 93.26 ರೂ. ಆಗಿದೆ. ಮೈಸೂರು, ಹುಬ್ಬಳ್ಳಿಯಲ್ಲೂ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿದೆ.

ಮುಂಬೈನಲ್ಲಿ ಈಗ ಪೆಟ್ರೋಲ್‌ ಬೆಲೆ 103.36 ರೂ. ಆಗಿದೆ. ಡೀಸೆಲ್‌ ಬೆಲೆ 95.44 ರೂ. ಆಗಿದೆ.  

Join Whatsapp