ಮುಂಬೈಯಲ್ಲೂ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿತು!

Prasthutha|

ಮುಂಬೈ : ಪೆಟ್ರೋಲ್‌, ಡೀಸೆಲ್‌ ಬೆಲೆ ಒಂದು ತಿಂಗಳಲ್ಲಿ 15ನೇ ಬಾರಿ ಏರಿಕೆ ಕಂಡು, ಇಂದು ಮುಂಬೈಯಲ್ಲೂ 1 ಲೀ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿದೆ. ಶನಿವಾರ ಪೆಟ್ರೋಲ್‌ ಬೆಲೆ 26 ಪೈಸೆ ಮತ್ತು ಡೀಸೆಲ್‌ ಬೆಲೆ 28 ಪೈಸೆ ಏರಿಕೆಯಾಗಿದೆ.

- Advertisement -

ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನದ ಹಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿ ದಿನಗಳೇ ಆಗಿವೆ. ಆದರೆ, ದೇಶದ ಪ್ರಮುಖ ವಾಣಿಜ್ಯ ನಗರವಾದ ಮುಂಬೈಯಲ್ಲೂ ಇದೀಗ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿದೆ.

ಮಧ್ಯಪ್ರದೇಶದ ರೇವಾದಲ್ಲಿ ಪೆಟ್ರೋಲ್‌ ಗೆ ಲೀಟರ್‌ ಗೆ 104.77 ರೂ, ಅನುಪುರದಲ್ಲಿ 104.72 ರೂ. ಆಗಿದೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಪೆಟ್ರೋಲ್‌ ಗೆ ಲೀಟರ್‌ ಗೆ 104.94 ರೂ. ಆಗಿದೆ.

Join Whatsapp