ನವದೆಹಲಿ : ಪೆಟ್ರೊಲ್, ಡೀಸೆಲ್ ಬೆಲೆ ಕಳೆದ ಕೆಲವು ದಿನಗಳಿಂದ ಸತತವಾಗಿ ರಾಕೆಟ್ ವೇಗದಲ್ಲಿ ಏರುತ್ತಲೇ ಇದೆ. ಇದೀಗ ಮಧ್ಯಪ್ರದೇಶದ ಬಹುತೇಕ ಎಲ್ಲಾ ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ. ಗಡಿ ದಾಟಿದೆ. ಮಧ್ಯಪ್ರದೇಶದ 51 ನಗರಗಳಲ್ಲಿ 27 ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ.100ರ ಗಡಿ ದಾಟಿದೆ. ಅಲ್ಲಿನ ರೇವಾದಲ್ಲಿ ಪೆಟ್ರೋಲ್ ಬೆಲೆ ಗರಿಷ್ಠ ಲೀಟರ್ ಗೆ 101.73 ರೂ. ಆಗಿದೆ ಮತ್ತು ಅನುಪುರದಲ್ಲಿ 101.56 ಆಗಿದೆ. ಇನ್ನುಳಿದಂತೆ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ ಶತಕದ ಗಡಿಯತ್ತ ಧಾವಿಸುತ್ತಿದೆ.
ರಾಜಸ್ಥಾನದ ಮೂರು ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಅಲ್ಲಿನ ಗಂಗಾನಗರದಲ್ಲಿ ಗರಿಷ್ಠ 101.41 ರೂ. ಆಗಿದೆ.
ದೇಶದ ಇತರ ನಗರಗಳಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 94.22, ಡೀಸೆಲ್ 86.37 ಆಗಿದೆ. ಭೋಪಾಲ್ ನಲ್ಲಿ ಪೆಟ್ರೋಲ್ 99.21 ರೂ., ಡೀಸೆಲ್ 89.76 ರೂ. ಆಗಿದೆ. ಮುಂಬೈಯಲ್ಲಿ ಪೆಟ್ರೋಲ್ 97.57 ರೂ., ಡೀಸೆಲ್ 88.60 ರೂ., ಪಾಟ್ನಾದಲ್ಲಿ ಪೆಟ್ರೋಲ್ 93.48 ರೂ., ಡೀಸೆಲ್ 86.73 ರೂ.ಗೆ ಏರಿಕೆಯಾಗಿದೆ.