ಪೆಟ್ರೋಲ್, ಡೀಸೆಲ್ ಸತತ ಎರಡನೇ ದಿನವೂ ಬೆಲೆಯಲ್ಲಿ ಏರಿಕೆ!

Prasthutha|

ನವದೆಹಲಿ: ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‍ ಗೆ 80 ಪೈಸೆ ಹೆಚ್ಚಳ ಮಾಡಿವೆ.

- Advertisement -

ನಿನ್ನೆ 80 ಪೈಸೆ ಹೆಚ್ಚಳವಾಗಿದ್ದು, ಇಂದು ಕೂಡ 80 ಪೈಸೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಸೂಚನೆಯ ಪ್ರಕಾರ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‍ ಗೆ 102.26 ರೂ. ಇದ್ದರೆ ಡೀಸೆಲ್ 86.58 ರೂ. ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ 96.21 ರೂ.ನಿಂದ 97.01ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ 88.2 ರೂ.ನಿಂದ 86.67ಕ್ಕೆ ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ 111.67 ರೂ. ಇದ್ದರೆ ಡೀಸೆಲ್ 95.85 ರೂ.ಗಳಾಗಿದೆ. ಅಲ್ಲದೆ ನಿನ್ನೆ ಅಡುಗೆ ಅನಿಲ ಸಿಲಿಂಡರ್ ಬೆಲೆ 50 ರೂ ಏರಿಕೆ ಮಾಡಲಾಗಿದೆ.

Join Whatsapp