ಮತ್ತೊಮ್ಮೆ ಪೆಟ್ರೋಲ್, ಡಿಸೇಲ್ ಬೆಲೆಯೇರಿಕೆ !

Prasthutha|

ದೆಹಲಿ : ದೇಶಾದ್ಯಂತ ಇಂಧನ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ದಾಖಲೆಯ ಏರಿಕೆ ಮುಟ್ಟಿವೆ, ಪೆಟ್ರೋಲ್ ಚಿಲ್ಲರೆ ಮಾರಾಟ ದರವು ಪ್ರತಿ ಲೀಟರ್ ಗೆ 100.90 ರೂ. ಮತ್ತು ಡೀಸೆಲ್ ದರ 89.88 ರೂ ಗಳಾಗಿವೆ.

- Advertisement -

ದೆಹಲಿಯಲ್ಲಿ ಪೆಟ್ರೋಲ್ 35 ಪೈಸೆ ದುಬಾರಿಯಾಗಿದ್ದು, ಡೀಸೆಲ್ 26 ಪೈಸೆ ಏರಿಕೆಯಾಗಿದೆ. ಇತರ ರಾಜ್ಯಗಳಲ್ಲೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಹೆಚ್ಚಳವನ್ನು ಕಂಡಿವೆ. ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ ಮತ್ತು ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರಗಳಲ್ಲಿ ಭಿನ್ನವಾಗಿದೆ.

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 106.93 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 97.46 ರೂ ಗಳಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ನ ಹೆಚ್ಚಿನ ಬೆಲೆಯಿಂದ ತತ್ತರಿಸುತ್ತಿರುವ ಸಾಮಾನ್ಯ ನಾಗರಿಕರಿಗೆ ಪರಿಹಾರ ಒದಗಿಸಲು ಕೇಂದ್ರವು “ಹೃದಯ ವೈಶಾಲ್ಯ ತೋರಿಸಬೇಕು ಮತ್ತು ಇಂಧನದ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಬೇಕು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

- Advertisement -

“ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವತ್ತ ನಮ್ಮ ಗಮನ ವಿರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ್ ಯೋಜನೆಗೆ ಅನುಗುಣವಾಗಿ, ನಾವು ದೇಶದಲ್ಲಿ ನೈಸರ್ಗಿಕ ಅನಿಲ ಆಧಾರಿತ ಆರ್ಥಿಕತೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ” ಎಂದು ಗುರುವಾರ ಹೊಸದಾಗಿ ನೇಮಕಗೊಂಡ ಇಂಧನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.



Join Whatsapp