ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ !

Prasthutha|

ಮುಂಬೈ: ಇಂಧನ ದರ ಮತ್ತೆ ಏರಿಕೆ ಕಂಡಿದ್ದು, ಗ್ರಾಹಕನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಲೀಟರ್ ಪೆಟ್ರೋಲ್​​ ಮೇಲೆ 25 ರಿಂದ 30 ಪೈಸೆ ಹಾಗೂ ಡೀಸೆಲ್​ ಮೇಲೆ 28 ರಿಂದ 32 ಪೈಸೆ ಹೆಚ್ಚಳವಾಗಿದೆ.

- Advertisement -


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 25 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ದರ 101.64 ರೂ. ಹಾಗೂ 30 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 89.87 ರೂ.ಗೆ ಏರಿಕೆಯಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 26 ಪೈಸೆ ಏರಿಕೆಯೊಂದಿಗೆ ಲೀಟರ್​ ಪೆಟ್ರೋಲ್ ಬೆಲೆ 105.18ಕ್ಕೆ ಹಾಗೂ 32 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 95.38 ರೂ.ಗೆ ಏರಿಕೆಯಾಗಿದೆ.

ದೇಶದ ಪ್ರಮುಖ ಐದು ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ:
ನಗರ ಪೆಟ್ರೋಲ್ ಡೀಸೆಲ್ ಬೆಂಗಳೂರು 105.18 ರೂ. 95.38 ರೂ. ದೆಹಲಿ 101.64 ರೂ. 89.87 ರೂ. ಕೋಲ್ಕತ್ತಾ 102.17 ರೂ. 92.97 ರೂ. ಮುಂಬೈ 107.71 ರೂ. 97.52 ರೂ. ಚೆನ್ನೈ 99.36 ರೂ. 94.45 ರೂ.ಗಳು ಇವೆ.

Join Whatsapp