ತಮಿಳುನಾಡು: ತಮಿಳುನಾಡಿನ ನವದಂಪತಿಗೆ ಅವರ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ನ ಒಂದೊಂದು ಬಾಟಲಿಗಳ ಉಡುಗೊರೆ ನೀಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ತುಂಬಿರುವ ಬಾಟಲಿಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ ಕುಮಾರ್ ಮತ್ತು ಕೀರ್ತನಾ ಕೆಲ ಸಮಯ ಗೊಂದಲಕ್ಕೆ ಒಳಗಾದರು. ನಂತರ ನಗು ಮೊಗದಿಂದಲೇ ‘ಅಮೂಲ್ಯವಾದ’ ಉಡುಗೊರೆಯನ್ನು ಸ್ವೀಕರಿಸಿದರು.ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ 16 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ ತಲಾ 10 ರೂಪಾಯಿಯಷ್ಟು ಏರಿಕೆಯಾಗಿದೆ.