ರಂಝಾನ್ ಹಿನ್ನೆಲೆಯಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ವುಝೂ ಮಾಡಲು ಅಗತ್ಯ ಕ್ರಮ ಕಲ್ಪಿಸಲು ಕೋರಿ ಅರ್ಜಿ: ಏಪ್ರಿಲ್ 14ಕ್ಕೆ ವಿಚಾರಣೆ

Prasthutha|

ಅಹ್ಮದಾಬಾದ್: ರಂಝಾನ್ ಮಾಸಾಚರಣೆಯ ಹಿನ್ನೆಲೆಯಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ವುಝು ಪವಿತ್ರ ಶುದ್ಧೀಕರಣಕ್ಕೆ ಅಗತ್ಯ ಕ್ರಮ ಕಲ್ಪಿಸಲು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಏಪ್ರಿಲ್ 14ರಂದು ಆಲಿಸುವುದಾಗಿ ಸುಪ್ರೀಂಕೋರ್ಟ್ ಸಿಜೆಐ ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.

- Advertisement -


ರಂಝಾನ್ ನಡುವೆ ಏಪ್ರಿಲ್ 14ರಂದು ಗ್ಯಾನ್ ವಾಪಿ ಮಸೀದಿ ವಿವಾದವು ವಿಚಾರಣೆಗೆ ಬರುತ್ತಿದೆ. ಅಂಜುಮಾನ್ ಇಂತೆಜಾಮಿಯ ಮಸ್ಜಿದ್ ಸಮಿತಿಯು ಶುದ್ಧೀಕರಣದ ವುಝೂ ಆಚರಣೆಗೆ ಮನವಿ ಮಾಡಿದೆ.
ಮುಂದಿನ ಆದೇಶದವರೆಗೆ ಒಂದು ಶಿವಲಿಂಗ ಸಿಕ್ಕಿದೆ ಎಂದು ಹೇಳಲಾದ ಸ್ಥಳವನ್ನು ಹಾಗೆಯೇ ರಕ್ಷಿಸುವಂತೆ ಕಳೆದ ನವೆಂಬರ್ 11ರಂದು ಸರ್ವೋಚ್ಚ ನ್ಯಾಯಾಲಯವು ಆದೇಶ ಮಾಡಿತ್ತು.
ರಮಝಾನ್ ಮಾಸ ನಡೆದಿರುವುದರಿಂದ ಕೆಲವನ್ನು ಕ್ರಮವಾಗಿ ಸಜ್ಜು ಗೊಳಿಸಬೇಕಾಗಿದೆ. ಆದ್ದರಿಂದ ಈ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಮಸೀದಿಯ ಸಮಿತಿಯ ಪರ ವಕೀಲ ಹುಜೇಫ ಅಹ್ಮದಿ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದರು.


ವುಝೂಗಾಗಿ ಒಂದು ಪ್ರತ್ಯೇಕ ಪೀಪಾಯಿಯಲ್ಲಿ ನೀರು ಇಡಲಾಗುತ್ತದೆ. ರಮಝಾನ್ ತಿಂಗಳಾದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆರಾಧಕರು ಬರುತ್ತಾರೆ ಎಂದು ಹುಜೇಫ ಮನವಿ ಮಾಡಿದ್ದಾರೆ.
ಸಿಜೆಐ ಚಂದ್ರಚೂಡರು ಏಪ್ರಿಲ್ 14ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದರು. ಈ ನ್ಯಾಯ ಪೀಠದಲ್ಲಿ ಜಸ್ಟಿಸ್ ಸೂರ್ಯಕಾಂತ್ ಕೂಡ ಇರುತ್ತಾರೆ.
ಗ್ಯಾನ್ ವಾಪಿ ಮಸೀದಿ ಸಂಕೀರ್ಣದ ವಿವಾದದ ಸಂಬಂಧ ಹಿಂದೂ ಪರ ಅರ್ಜಿದಾರರು, ತುರ್ತು ಪರಿಹಾರ ನೀಡುವಂತೆ ಮಾರ್ಚ್ 28ರಂದು ಮನವಿ ಮಾಡಿದ್ದಕ್ಕೆ ಸುಪ್ರೀಂ ಕೋರ್ಟು ಏಪ್ರಿಲ್ 21ರಂದು ವಿಚಾರಣೆ ನಡೆಸುವುದಾಗಿ ಹೇಳಿತ್ತು.

- Advertisement -


ವಾರಣಾಸಿಯ ಜಿಲ್ಲಾ ನ್ಯಾಯಾಧೀಶರು ಐದು ಬಾರಿ ನ್ಯಾಯ ನೀಡಿಕೆಯಲ್ಲಿ ವಿಭಿನ್ನ ಆದೇಶ ನೀಡಿದ್ದಾರೆ. ಆದ್ದರಿಂದ ಎಲ್ಲ ಅರ್ಜಿಗಳನ್ನೂ ಒಗ್ಗೂಡಿಸಿ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ವಕೀಲ ವಿಷ್ಣು ಶಂಕರ ಜೈನ್ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ.
ಗ್ಯಾನ್ ವಾಪಿ ಮತ್ತು ಶೃಂಗಾರ ಗೌರಿ ವಿವಾದದ ಬಗೆಗಿನ ಎಲ್ಲ ಅರ್ಜಿಗಳನ್ನು ಒಗ್ಗೂಡಿಸುವಂತೆ ವಾರಣಾಸಿ ಜಿಲ್ಲಾ ಜಡ್ಜ್ ರಿಗೆ ಬೇರೆಯೇ ಅರ್ಜಿ ಸಲ್ಲಿಸುವಂತೆ ಹಿಂದೂ ಪರ ವಾದಿಸಿದವರಿಗೆ ಸುಪ್ರೀಂ ಕೋರ್ಟು ಮೊದಲೇ ಅನುಮತಿ ನೀಡಿತ್ತು.


ಸರ್ವೆ ಕಮಿಶನರ್ ರನ್ನು ನೇಮಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ನೀಡಿದ ಆದೇಶವನ್ನು ಅಂಜುಮಾನ್ ಇಂತೆಜಾಮಿಯ ಮಸ್ಜಿದ್ ಸಮಿತಿಯು ಪ್ರಶ್ನಿಸಿದ್ದು, ಇದಕ್ಕೆ ಮೂರು ವಾರದಲ್ಲಿ ಉತ್ತರ ನೀಡುವಂತೆಯೂ ಸುಕೋ ಹಿಂದು ಪ್ರತಿವಾದಿಗಳಿಗೆ ಹೇಳಿದೆ.



Join Whatsapp