ದೆಹಲಿ: ಆಗ್ರಾದ ಶಾಹಿ ಜಾಮಿಯಾ ಮಸೀದಿಯಲ್ಲಿ ಉತ್ಖನನ ನಡೆಸಲು ಪುರಾತತ್ವ ಇಲಾಖೆಗೆ ಸೂಚಿಸಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್ ಗೆ ವಕೀಲ ವರುಣ್ ಕುಮಾರ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.
ಮಂದಿರವನ್ನು ಕೆಡವಿ, ಅದೇ ಜಾಗದಲ್ಲಿ ಜಾಮಿಯಾ ಮಸೀದಿಯನ್ನು ನಿರ್ಮಿಸಲಾಗಿದೆ. ಮಸೀದಿಯ ಮೆಟ್ಟಿಲುಗಳ ಅಡಿಯಲ್ಲಿ ಠಾಕೂರ್ ಕೇಶವ್ ದೇವ್ (ದೇವರ) ವಿಗ್ರಹವಿದೆ. ವೈಜ್ಞಾನಿಕ ರೀತಿಯಲ್ಲಿ ಉತ್ಖನನ ಮಾಡಿದರೆ ವಿಗ್ರಹ ಲಭ್ಯವಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.
ಉತ್ಖನನ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಶಾಹಿ ಜಾಮಿಯಾ ಮಸೀದಿಯ ಇಮಾಮ್, ‘ಶಾಹಿ ಜಾಮಿಯಾ ಮಸೀದಿಯನ್ನು ಮೊಗಲ್ ದೊರೆ ಶಹಜಹಾನ್ ಮಗಳು ಜಹಾನ್ ಆರಾ ತನ್ನ ಮದುವೆಗೆಂದು ಮೀಸಲಿಟ್ಟಿದ್ದ ಹಣದಿಂದ ಕಟ್ಟಿಸಿದ್ದಾರೆ’ ಎಂದು ವಿವರಿಸಿದರು.
ದೇವಸ್ಥಾನದ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬ ಆರೋಪಗಳ ಕುರಿತು ವಿವರಣೆ ನೀಡಿದ ಅವರು, ‘ಇಂಥ ಆರೋಪಗಳಿಗೆ ಯಾವುದೇ ಪುರಾವೆಯಿಲ್ಲ ಎಂದು ತಿಳಿಸಿದರು.