2,800 ಕೋಟಿ ರೂ.ಲಾಟರಿ ಗೆದ್ದ ವ್ಯಕ್ತಿ: ಹಣ ಕೊಡಲು ಸಂಸ್ಥೆ ನಿರಾಕರಣೆ

Prasthutha|

ವಾಷಿಂಗ್ಟನ್‌: ಲಾಟರಿ ಗ್ರಾಹಕರೋರ್ವರು ತಾನು 2,800 ಕೋಟಿ ರೂ. ಲಾಟರಿ ಗೆದ್ದಿದ್ದು, ಲಾಟರಿ ಸಂಖ್ಯೆ ಗೆದ್ದ ಹಣ ಕೊಡಲು ನಿರಾಕರಿಸಿದೆ ಎಂದು ಕೋರ್ಟ್‌ಗೆ ದೂರು ನೀಡಿದ್ದಾರೆ. ನಿಮ್ಮ ನಂಬರ್ ತಪ್ಪಾಗಿ ಮುದ್ರಿತವಾಗಿದೆ ಅಷ್ಟೇ, ನೀವು ಗೆದ್ದಿಲ್ಲ ಎಂದು ಸಬೂಬು ನೀಡಿದ್ದ ಲಾಟರಿ ಸಂಸ್ಥೆ ವಿರುದ್ಧ ಗ್ರಾಹಕ ಪ್ರಕರಣ ದಾಖಲಿಸಿರುವ ಈ ಘಟನೆ ಅಮೆರಿಕದ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ವರದಿಯಾಗಿದೆ.

- Advertisement -

ಜಾನ್‌ ಚೀಕ್ಸ್‌ ಎಂಬವರು 2023ರ ಜ.6ರಂದು ಪವರ್‌ಬಾಲ್‌ ಹಾಗೂ ಡಿ.ಸಿ.ಲಾಟರಿ ಸಂಸ್ಥೆಯಿಂದ ಲಾಟರಿ ಖರೀದಿಸಿದ್ದರು. 2 ದಿನಗಳ ಬಳಿಕ ನೋಡಿದಾಗ ತನ್ನ ಲಾಟರಿ ಸಂಖ್ಯೆಗೆ ಜಾಕ್ ಪಾಟ್ ಹೊದಿರುವುದು ಕಂಡು ಬಂದಿದೆ. ಜಾನ್‌ ಸಂಸ್ಥೆಯನ್ನು ಸಂಪರ್ಕಿಸಿ ಗೆದ್ದಿರುವ ಹಣ ಕೇಳಿದರೆ, ಸಂಸ್ಥೆಯವರು ಸಂಖ್ಯೆ ತಪ್ಪಾಗಿ ಮುದ್ರಿತವಾಗಿ ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಜಾನ್‌ ಈಗ ತಾವು ಗೆದ್ದಿದ್ದ ಲಾಟರಿ ಮೊತ್ತ ಹಾಗೂ ಅದರ ಬಡ್ಡಿಯೂ ಸೇರಿ 2,800 ಕೋಟಿ ರೂ. ತನಗೆ ಬರಬೇಕು ಎಂದು ದಾವೆ ಹೂಡಿದ್ದಾರೆ.

- Advertisement -



Join Whatsapp