ಮೌಢ್ಯ ರಹಿತ ಆಚರಣೆಗಳನ್ನು ಎಲ್ಲ ಧರ್ಮದವರೂ ಗೌರವಿಸಬೇಕು: ಎಚ್. ಸಿ ಮಹದೇವಪ್ಪ

Prasthutha|

ಬೆಂಗಳೂರು: ಮನುಷ್ಯನಲ್ಲಿ ಒಳ್ಳೆಯತನ ಇದ್ದರೆ ಹಿಜಾಬ್, ಹಲಾಲ್, ಕುಂಕುಮ ಯಾವುದೂ ಕೂಡಾ ಸಮಸ್ಯೆಯಾಗುವುದಿಲ್ಲ ಎಂದು ಮಾಜಿ ಸಚಿವ ಎಚ್. ಸಿ ಮಹದೇವಪ್ಪ ಹೇಳಿದ್ದಾರೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ‘ಇಲ್ಲಿ ಗುಡಿ, ಚರ್ಚು, ಮಸೀದಿ ಯಾವುದೂ ಸಮಸ್ಯೆಯಲ್ಲ. ಮೌಢ್ಯ ರಹಿತ ಆಚರಣೆಗಳನ್ನು ಎಲ್ಲ ಧರ್ಮದವರೂ ಗೌರವಿಸಬೇಕು. ಇಷ್ಟವಿದ್ದರೆ ಭಾಗಿಯಾಗಬೇಕು’.

‘ಮನುಷ್ಯನ ಹಸಿವಿನ ಮುಂದೆ ಯಾವ ಧರ್ಮವೂ ನಿಲ್ಲಲಾರದು ಇದೇ ಸಂವಿಧಾ‌ನ ನಮಗೆ ಹೇಳುವಂತಹ ತಿಳುವಳಿಕೆ. ಆದರೆ ಈ ದಿನ ದೇಶದ ಆಮ್ಲಜನಕವಾಗಿರುವ ಪ್ರಜಾಪ್ರಭುತ್ವವನ್ನು ಉಸಿರಾಡಬೇಕಾದ ಮನುಷ್ಯ ವಿರೋಧಿಗಳು ದ್ವೇಷದ ವಿಷವನ್ನೇ ಉಸಿರಾಡುತ್ತಿದ್ದು, ಮಾನಸಿಕವಾಗಿ ಅವರುಉಳಿಯುವಂತಹ ಲಕ್ಷಣ ಕಾಣುತ್ತಿಲ್ಲ. ಇಂತಹ ಜನರಿಂದ ಬಾಬಾ ಸಾಹೇಬರ ಪ್ರಯತ್ನಗಳಿಗೆ ಸೋಲಾಗಬಾರದು’ ಎಂದು  ಹೇಳಿದ್ದಾರೆ.



Join Whatsapp