ಬೆಂಗಳೂರು: ಬಿಜೆಪಿಯ ಸಂವಿಧಾನದ ವಿರೋಧಿ ನೀತಿಗಳಿಗೆ ಜನ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಬೇರೆ ಪಕ್ಷಗಳನ್ನು ಆಶ್ರಯಿಸಿಯೇ ಸರ್ಕಾರ ಮಾಡಬೇಕು. ಬಿಜೆಪಿ ಹಿಡನ್ ಅಜೆಂಡಾ ಜಾರಿ ಮಾಡುವುದು ಸುಲಭವಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಮತದಾರರು ಶಾಂತಿಯುತ ಮತದಾನ ಮಾಡಿದ್ದಾರೆ. 70% ಮತದಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ 100% ಆಗಲಿ. ಮತದಾನ ಮಾಡಿದವರಿಗೆ ಧನ್ಯವಾದಗಳು. 2019ರಲ್ಲಿ ಒಂದು ಸ್ಥಾನ ಗೆದ್ದಿದ್ದು, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ಕನಿಷ್ಠ 12-14 ಸ್ಥಾನ ಗೆಲ್ಲಬೇಕಿತ್ತು. ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಮತಗಳ ಧ್ರುವೀಕರಣ ಆಗಿದೆ. ಇದರಿಂದಾಗಿ 5-6 ಕ್ಷೇತ್ರಗಳಲ್ಲಿ ಹಿನ್ನಡೆ ಆಗಿದೆ ಎಂದರು.