ಜನರು 3ನೇ ಬಾರಿಗೆ ಈ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ: ಸಂಸತ್‌’ನಲ್ಲಿ ರಾಷ್ಟ್ರಪತಿ ಭಾಷಣ

Prasthutha|

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು.

- Advertisement -

ಹೊಸ ಸರ್ಕಾರದ ಮುಂದಿನ 5 ವರ್ಷಗಳ ಮಾರ್ಗಸೂಚಿಯ ರೂಪುರೇಷೆಗಳನ್ನು ಮಂಡಿಸಿದ ದ್ರೌಪದಿ ಮುರ್ಮು ಅವರು, 18ನೇ ಲೋಕಸಭೆಗೆ ಹೊಸದಾಗಿ ಆಯ್ಕೆಯಾದ ಎಲ್ಲ ಸಂಸದರನ್ನು ಅಭಿನಂದಿಸಿದರು. ಜೊತೆಗೆ ಲೋಕಸಭೆಯ ಸ್ಪೀಕರ್ ಆಗಿ ಮರು ಆಯ್ಕೆಗೊಂಡ ಓಂ ಬಿರ್ಲಾ ಅವರಿಗೂ ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ ದ್ರೌಪದಿ ಮುರ್ಮು ಅವರು, ಭಾರತದ ಜನರು ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿರುವುದನ್ನು ಜಗತ್ತು ನೋಡುತ್ತಿದೆ ಎಂದು ಹೇಳಿದರಲ್ಲದೇ, ಆರು ದಶಕಗಳ ನಂತರ ಇದು ಸಾಧ್ಯವಾಗಿದೆ. ಇಂತಹ ಸಮಯದಲ್ಲಿ, ಭಾರತದ ಜನರ ಆಕಾಂಕ್ಷೆಗಳು ಅತ್ಯುನ್ನತವಾಗಿವೆ. ಜನರು ಮೂರನೇ ಬಾರಿಗೆ ನನ್ನ ಸರ್ಕಾರದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನ ಸರ್ಕಾರ ಮಾತ್ರ ಅವರ ಆಶೋತ್ತರಗಳನ್ನು ಈಡೇರಿಸಬಲ್ಲದು ಎಂಬ ವಿಶ್ವಾಸವಿದೆ ಎಂದು ಹೇಳಿದರು.

- Advertisement -

ನಾನು ಚುನಾವಣಾ ಆಯೋಗವನ್ನು ದೇಶದ ಜನತೆಯ ಪರವಾಗಿ ಅಭಿನಂದಿಸುತ್ತೇನೆ. ಈ ಭಾರಿ ದೇಶದಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಚುನಾವಣೆ ನಡೆದಿತ್ತು. ಇದರಲ್ಲಿ ಮಹಿಳೆಯರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾಶ್ಮೀರದ ಜನರು ಸಹ ಉತ್ಸಾಹದಿಂದ ಭಾಗವಹಿಸಿದ ಚಿತ್ರಣ ಕಂಡು ಬಂದಿದೆ. ಪ್ರಥಮ ಬಾರಿಗೆ ಮನೆಯಲ್ಲೇ ಮತದಾನ ನಡೆಸಲಾಗಿದೆ. ಇದನ್ನು ನಾನು ಅಭಿನಂದಿಸುತ್ತೇನೆ. 2024 ರ ಚುನಾವಣೆ ಇಂದು ಪ್ರಪಂಚದಾದ್ಯಂತ ಚರ್ಚೆಯಾಗುತ್ತಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

Join Whatsapp