ದುಬೈ ಎಕ್ಸ್‌ಪೋ 2020| ‘ಇಂಡಿಯನ್ ಪೆವಿಲಿಯನ್’ ಗೆ ಹರಿದು ಬರುತ್ತಿರುವ ಜನಸಾಗರ!

Prasthutha|

ದುಬೈ: ದುಬೈ ಎಕ್ಸ್‌ಪೋ 2020 ರಲ್ಲಿ ‘ಇಂಡಿಯನ್ ಪೆವಿಲಿಯನ್’ ಸಂದರ್ಶಕರಿಗೆ ನೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದ್ದು, ಎರಡು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆನಂದಿಸಿದ್ದಾರೆ ಎಂದು ನವೆಂಬರ್ 3ರವರೆಗಿನ ಅಂಕಿಅಂಶಗಳನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

- Advertisement -

ಎಕ್ಸ್‌ಪೋದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡಿದ ಸ್ಥಳವಾಗಿದೆ ಇಂಡಿಯನ್ ಪೆವಿಲಿಯನ್‌. ಭಾರತದ ಪರಂಪರೆ ಮತ್ತು ಪ್ರಗತಿಯನ್ನು ಸಂಯೋಜಿಸುವ ಪೆವಿಲಿಯನ್ ಅನೇಕ ಹೂಡಿಕೆ ಅವಕಾಶಗಳಿಗೆ ವೇದಿಕೆಯನ್ನು ಒದಗಿಸಿದೆ. ಅದೇ ರೀತಿ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪೆವಿಲಿಯನ್ ನಲ್ಲಿ ಆಯೋಜಿಸಲಾಗಿದೆ.

ಅಕ್ಟೋಬರ್ನಲ್ಲಿ ನಡೆದ ಇಂಡಿಯನ್ ಪೆವಿಲಿಯನ್ ಉತ್ತಮ ಯಶಸ್ಸು ಕಂಡಿದ್ದು, ಮುಂದಿನ ತಿಂಗಳುಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ದುಬೈನಲ್ಲಿ ಭಾರತದ ಕಾನ್ಸುಲ್ ಜನರಲ್ ಮತ್ತು ಎಕ್ಸ್ಪೋ 2020 ದುಬೈನಲ್ಲಿ ಭಾರತದ ಡೆಪ್ಯುಟಿ ಕಮಿಷನರ್ ಜನರಲ್ ಅಮನ್ ಪುರಿ ಹೇಳಿದ್ದಾರೆ.

- Advertisement -

ಭಾರತೀಯ ಪೆವಿಲಿಯನ್ ಸಹಕಾರ, ಹೂಡಿಕೆ ಹಾಗೂ ಹೆಚ್ಚಿನ ಅವಕಾಶಗಳಿಗೆ ವೇದಿಕೆಯಾಗಲಿದೆ. ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಭಾರತದ ಆಚರಣೆಗಳು, ಪದ್ಧತಿಗಳು, ವೈವಿಧ್ಯಮಯ ಆಹಾರ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನಿರ್ಣಾಯಕವಾಗಿವೆ ಎಂದು ಅವರು ಹೇಳಿದರು.



Join Whatsapp