ಜನರು ದೂರದರ್ಶನ ನಂಬದಿದ್ದರೂ BBC ನಂಬುತ್ತಾರೆ ಎಂದ ಪ್ರಧಾನಿ ಮೋದಿ

Prasthutha|

ನವದೆಹಲಿ: ಜನರು ದೂರದರ್ಶನವನ್ನು ನಂಬದಿದ್ದರೂ ಬಿಬಿಸಿಯನ್ನು ನಂಬುತ್ತಾರೆಂದು ಪ್ರಧಾನಿ ನರೇಂದ್ರ ಮೋದಿಯವರು ಬಿಬಿಸಿ ನ್ಯೂಸ್ ಚಾನೆಲ್ ಅನ್ನು ಹೊಗಳಿದ್ದ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


ಗುಜರಾತ್ ಗಲಭೆ ಕುರಿತು ಬಿಬಿಸಿ ಮಾಡಿರುವ ಸಾಕ್ಷ್ಯಾಚಿತ್ರವನ್ನು ಭಾರತದಲ್ಲಿ ಸರ್ಕಾರ ನಿರ್ಬಂಧಿಸಿರುವ ಬೆನ್ನಲ್ಲೇ, ‘ಬಿಬಿಸಿಯನ್ನು ಮೋದಿಯವರು ಹೊಗಳಿದ್ದ ವೀಡಿಯೊ’ ಮುನ್ನೆಲೆಗೆ ಬಂದಿದೆ. 2013ರಲ್ಲಿ ಮೋದಿಯವರು ಬಿಬಿಸಿಯನ್ನು ಹೊಗಳಿ ಮಾತನಾಡಿದ್ದರು.

- Advertisement -

ವಿಡಿಯೊದಲ್ಲಿ ಏನಿದೆ?
ವೈರಲ್ ವೀಡಿಯೋದಲ್ಲಿ, ಸಾಮಾನ್ಯ ಜನರು ಏನು ಮಾತನಾಡುತ್ತಾರೆ? ನಾನು ಇದನ್ನು ಬಿಬಿಸಿಯಲ್ಲಿ ಕೇಳಿದ್ದೇನೆ ಎನ್ನುತ್ತಾರೆ. ನಮ್ಮ ದೇಶದ ಆಲ್ ಇಂಡಿಯಾ ರೇಡಿಯೋವನ್ನು ಅವರು ನಂಬುವುದಿಲ್ಲ, ದೂರದರ್ಶನವನ್ನು ಅವರು ನಂಬುವುದಿಲ್ಲ, ಅವರು ಪತ್ರಿಕೆಯನ್ನು ನಂಬುವುದಿಲ್ಲ. ನಾನು ಬಿಬಿಸಿಯಲ್ಲಿ ಕೇಳಿದ್ದೇನೆ ಎನ್ನುತ್ತಾರೆ ಎನ್ನುವ ಮೋದಿಯವರು ಈ ರೀತಿಯ ವಿಶ್ವಾಸಾರ್ಹತೆ ಇರಬೇಕು ಎಂಬ ಅವರು ಅಭಿಪ್ರಾಯ ಪಟ್ಟಿದ್ದರು.

- Advertisement -