ಮಧ್ಯರಾತ್ರಿ ಲುಲೂ ಮಾಲ್’ನಲ್ಲಿ ಜನವೋ ಜನ: ಕಾರಣ ಇಲ್ಲಿದೆ!

Prasthutha|

ಕೊಚ್ಚಿನ್: ಕೇರಳದ ಕೊಚ್ಚಿನ್ ನ ಲುಲೂ ಮಾಲ್ ನಲ್ಲಿ ಮಧ್ಯರಾತ್ರಿ ಸಾವಿರಾರು ಜನರನ್ನು ಕಂಡು ಸ್ವತಃ ಸಿಬ್ಬಂದಿಯೇ ದಂಗಾಗಿದ್ದಾರೆ.

- Advertisement -

ರಾತ್ರಿ 11.50 ರ ನಂತರ ಮಾಲ್ ಬಾಗಿಲ ಮುಂದೆ ಜನರು ಜಮಾಯಿಸಿದ್ದಾರೆ. ಸಿಬ್ಬಂದಿ ಬಾಗಿಲು ತೆಗೆದ ಕೂಡಲೇ ಗುಂಪು ಗುಂಪಾಗಿ ಒಳನುಗ್ಗಿದ್ದಾರೆ.

ಜುಲೈ 7 ರಂದು ಈ ಘಟನೆ ನಡೆದಿದೆ. ಜುಲೈ 6 ರ ರಾತ್ರಿ 11.59 ಕ್ಕೆ ಮಾಲ್ ನಲ್ಲಿ ಶೇ .50 ರಷ್ಟು ರಿಯಾಯಿತಿಯನ್ನು ಘೋಷಿಸಿತ್ತು. ಈ ರಿಯಾಯಿತಿ ಕೇವಲ ಒಂದು ರಾತ್ರಿಯವರೆಗೆ ಮಾತ್ರ ಅವಕಾಶ ನೀಡಿತ್ತು. ಇದೇ ಕಾರಣಕ್ಕೆ ರಾತ್ರೋ ರಾತ್ರಿ ಮಾಲ್ ಗೆ ಪ್ರವಾಹದ ರೀತಿಯಲ್ಲಿ ಜನರು ಜಮಾಯಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಅಗಿದೆ.

Join Whatsapp