ಹೊಸದಿಲ್ಲಿ: ಇಸ್ರೇಲಿ ಗೂಢಚಾರ ಸಾಫ್ಟ್ ವೇರ್ ಪೆಗಾಸಸ್ ಬೇಹುಗಾರಿಕೆಯ ಸಂತ್ರಸ್ತರಲ್ಲಿ 25 ಕ್ಕೂ ಹೆಚ್ಚು ಕಾಶ್ಮೀರಿ ರಾಜಕೀಯ ಮುಖಂಡರು ಮತ್ತು ಪತ್ರಕರ್ತರು ಸೇರಿದ್ದಾರೆ ಎಂದು ವರದಿಯಾಗಿದೆ.
ಪ್ರತ್ಯೇಕತಾವಾದಿ ನಾಯಕ ಬಿಲಾಲ್ ಲೋನ್, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ದಿವಂಗತ ಎಸ್.ಎ.ಆರ್. ಗೀಲಾನಿ ಪಿಡಿಪಿ ನಾಯಕಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಇಬ್ಬರು ಸಂಬಂಧಿಕರು ಸೇರಿದಂತೆ 25 ಕ್ಕೂ ಹೆಚ್ಚು ಜನರ ಫೊನ್ ಗಳನ್ನು ಸೋರಿಕೆ ಮಾಡಲಾಗಿದೆ.
ವಿವಿಧ ರಾಜಕೀಯ ಪಕ್ಷಗಳ ನಾಯಕರು, ರಾಜಕಾರಣಿಗಳು, ಕಾರ್ಯಕರ್ತರು ಮತ್ತು ಪತ್ರಕರ್ತರ ಪಟ್ಟಿಯನ್ನು ‘ದಿ ವೈರ್’ ಬಿಡುಗಡೆ ಮಾಡಿದೆ. 2017 ರಿಂದ 2019 ರವರೆಗೆ 25 ಕ್ಕೂ ಹೆಚ್ಚು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖಂಡರು ಮತ್ತು ಪತ್ರಕರ್ತರ ಫೋನ್‌ಗಳನ್ನು ಪೆಗಾಸಸ್ ಸೋರಿಕೆ ಮಾಡಿದೆ.