ಪೆಗಾಸೆಸ್ ಕಣ್ಗಾವಲು: ನ್ಯೂಯಾರ್ಕ್ ಟೈಮ್ಸ್ ವರದಿ ಪರಿಶೀಲನೆ ಕೋರಿ ಸುಪ್ರೀಮ್ ಕೋರ್ಟ್ ಗೆ ಪತ್ರ

Prasthutha|

ನವದೆಹಲಿ: ಪೆಗಾಸೆಸ್ ಸ್ಪೈವೇರ್ ಬಳಸಿಕೊಂಡು ದೇಶದ ನಾಗರಿಕರ ಮೇಲೆ ಗೂಢಚಾರಿಕೆ ಮಾಡಲಾಗಿದೆ ಎಂಬ ನ್ಯೂಯಾರ್ಕ್ ಟೈಮ್ಸ್ ನ ತನಿಖಾ ವರದಿಯನ್ನು ಪರಿಶೀಲನೆ ನಡೆಸುವಂತೆ ಕೋರಿ ಸುಪ್ರೀಮ್ ಕೋರ್ಟ್ ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪತ್ರದ ಮೂಲಕ ಒತ್ತಾಯಿಸಿದೆ.

- Advertisement -

ಕೇಂದ್ರ ಸರ್ಕಾರ 2017 ಇಸ್ರೇಲ್ ಮೂಲದ ಕಂಪೆನಿಯಿಂದ ದೇಶದ ನಾಗರಿಕರನ್ನು ಕಣ್ಗಾವಲಿನಲ್ಲಿಡಲು ಪೆಗಾಸೆಸ್ ಸ್ಪೈವೇರ್ ಅನ್ನು ಖರೀದಿಸಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ಇತ್ತೀಚೆಗೆ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಸುಮಾರು 2 ಶತಕೋಟಿ ಡಾಲರ್ ಮೌಲ್ಯದ ಆಧುನಿಕ ಶಸ್ತ್ರಾಸ್ತ್ರ ಮತ್ತು ಗುಪ್ತಚರ ಸಾಮಾಗ್ರಿಗಳನ್ನು ಸ್ಪೈವೇರ್ ಪ್ಯಾಕೇಜ್ ನಲ್ಲಿ ಖರೀದಿಸಿದೆ ಎಂದು ವರದಿ ಮಾಡಿತ್ತು.

ಈ ಕುರಿತು ಸುಪ್ರೀಮ್ ಕೋರ್ಟ್ ನಿವೃತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಎಂಬವರಿಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಬರೆದ ಪತ್ರದಲ್ಲಿ ನ್ಯೂಯಾರ್ಕ್ ವರದಿಯನ್ನು ಉಲ್ಲೇಖಿಸಿದೆ. ಕೇಂದ್ರ ಸರ್ಕಾರ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ಮತ್ತು ಸಚಿವಾಲಯಗಳ ಕಾರ್ಯದರ್ಶಿಗಳಿಂದ ಉತ್ತರಿಸುವಂತೆ ತಾಂತ್ರಿಕ ಸಮಿತಿಗೆ ಮನವಿ ಮಾಡಿದೆ.

- Advertisement -

ಪೆಗಾಸೆಸ್ ಸ್ಪೈವೇರ್ ಬಗ್ಗೆ ತನಿಖೆ ನಡೆಸಲು ಸುಪ್ರೀಮ್ ಕೋರ್ಟ್, ನ್ಯಾಯಾಮೂರ್ತಿ ರವೀಂದ್ರನ್ ನೇತೃತ್ವದ ತ್ರಿ ಸದಸ್ಯರ ತಾಂತ್ರಿಕ ಸಮಿತಿಯೊಂದನ್ನು ರಚಿಸಿದೆ.



Join Whatsapp