ಪೇಸಿಎಂ ಪೋಸ್ಟರ್ ಅಭಿಯಾನ: ಸಿದ್ದು ಡಿಕೆಶಿ ಮೇಲೆ ಎನ್ ಸಿಆರ್ ದಾಖಲು

ಬೆಂಗಳೂರು: ಪೇಸಿಎಂ ಪೋಸ್ಟರ್ ಅಂಟಿಸಿದ್ದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಹೈಗ್ರೌಂಡ್ಸ್ ಪೊಲೀಸರು ಎನ್ ಸಿಆರ್ ದಾಖಲು ಮಾಡಿದ್ದಾರೆ.


ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಪೇ ಸಿಎಂ ಪೋಸ್ಟರ್ ಅಂಟಿಸುವ ಅಭಿಯಾನ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಹೈಗ್ರೌಂಡ್ಸ್ ಪೊಲೀಸರು ಎನ್ ಸಿಆರ್ ದಾಖಲು ಮಾಡಿದ್ದಾರೆ.

- Advertisement -


ಕಾಂಗ್ರೆಸ್ ನಾಯಕರು ಅನುಮತಿ ಇಲ್ಲದೇ ಏಕಾಏಕಿ ರಸ್ತೆಗೆ ಬಂದಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ರಸ್ತೆಯಲ್ಲಿ ಗುಂಪು ಸೇರಿ ವಾಹನ ಸಂಚಾರಕ್ಕೂ ಅಡ್ಡಿಪಡಿಸಿದ್ದರು ಎಂದು ಪೊಲೀಸರು ಇದೀಗ ಎನ್ ಸಿಆರ್ ದಾಖಲಿಸಿದ್ದಾರೆ.

- Advertisement -