ಸೌದಿ ಅರೇಬಿಯಾದಲ್ಲಿ ಉದ್ಯೋಗ ವೀಸಾದ ಸ್ಟ್ಯಾಂಪಿಂಗ್’ಗೆ ಇನ್ನು ಮುಂದಕ್ಕೆ PCC ಕಡ್ಡಾಯವಲ್ಲ

Prasthutha|

ನವದೆಹಲಿ: ಸೌದಿ ಅರೇಬಿಯಾದ ಉದ್ಯೋಗ ವೀಸಾ ಸ್ಟ್ಯಾಂಪಿಂಗ್’ಗೆ PCC ಕಡ್ಡಾಯ ಎಂಬ ಸೌದಿ ಸರ್ಕಾರದ ಹೊಸ ನಿಯಮಾವಳಿಯನ್ನು ರದ್ದುಗೊಳಿಸಲಾಗಿದೆ ಎಂದು ನವದೆಹಲಿಯಲ್ಲಿರುವ ಸೌದಿ ಕಾನ್ಸುಲೇಟ್ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

- Advertisement -

ಉದ್ಯೋಗ ವೀಸಾ ಸ್ಟ್ಯಾಂಪಿಂಗ್ ಅನ್ನು ಪೂರ್ತಿಗೊಳಿಸಲು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ (PCC) ಇನ್ನು ಮುಂದಕ್ಕೆ ಕಡ್ದಾಯವಲ್ಲ. ನವದೆಹಲಿಯ ಸೌದಿ ಕಾನ್ಸೆಲೇಟ್ ಈ ಬಗ್ಗೆ ಎಲ್ಲಾ ನೇಮಕಾತಿ ಏಜೆಂಟರಿಗೆ ಮತ್ತು ಅಧಿಕೃತ ಟ್ರಾವೆಲ್ ಏಜೆನ್ಸಿಗಳಿಗೆ ಅಧಿಸೂಚನೆ ಹೊರಡಿಸಿದೆ.

ಇದರಿಂದ ಸೌದಿಗೆ ತೆರಳುವ ಭಾರತೀಯರಿಗೆ ಅನುಕೂಲವಾಗಲಿದೆ.

- Advertisement -

ಸೌದಿಯಲ್ಲಿ ನೆಲೆಸಿರುವ ಎರಡು ದಶಲಕ್ಷಕ್ಕೂ ಹೆಚ್ಚು ಭಾರತೀಯ ನಾಗರಿಕರ ಕೊಡುಗೆಯನ್ನು ಸರ್ಕಾರ ಶ್ಲಾಘಿಸುತ್ತದೆ” ಎಂದು ಸೌದಿ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.



Join Whatsapp