ಮಂಗಳೂರು: ಕಳೆದ ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್ ಪ್ರಕರಣವನ್ನು ಭೇದಿಸಲು, ಈ ಪ್ರಕರಣದ ತನಿಖಾಧಿಕಾರಿಯಾಗಿ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಅವರನ್ನು ನೇಮಿಸಲಾಗಿದೆ.
ಜಿಲ್ಲೆಯಾದ್ಯಂತ ಸಾಕಷ್ಟು ಆತಂಕ ಮೂಡಿಸಿದ್ದ ಈ ಪ್ರಕರಣದ ತನಿಖೆಯನ್ನು ಹಿರಿಯ ಉನ್ನತ ಅಧಿಕಾರಿಗಳಿಂದ ನಡೆಸುವಂತೆ ಮೃತ ಫಾಝಿಲ್’ನ ತಂದೆ ಮಾಡಿದ್ದು, ಇದನ್ನು ಗಣನೆಗೆ ತೆಗೆದುಕೊಂಡು ಇಲಾಖೆ ಎಸಿಪಿ ಅವರನ್ನೇ ತನಿಖಾಧಿಕಾರಿಯಾಗಿ ನೇಮಕ ಮಾಡಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರು ತಿಳಿಸಿದ್ದಾರೆ.
ಜುಲೈ 28 ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್’ನಲ್ಲಿ ಫಾಝಿಲ್ ನನ್ನು ತಂಡವೊಂದು ಮಾರಕಾಯುಧದಿಂದ ಕಡಿದು ಹತ್ಯೆ ನಡೆಸಿ ಪರಾರಿಯಾಗಿತ್ತು.