ಜೈಲಿನಲ್ಲಿ ಚಂದ್ರಬಾಬು ನಾಯ್ಡು ಭೇಟಿಯಾದ ಪವನ್ ಕಲ್ಯಾಣ್

Prasthutha|

ಹೈದರಾಬಾದ್: ನಟ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ TDP) ಶಾಸಕ- ನಟ ಬಾಲಕೃಷ್ಣ ಮತ್ತು ನಾರಾ ಲೋಕೇಶ್ ಅವರೊಂದಿಗೆ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಇಂದು ಗುರುವಾರ ಸುಮಾರು 40 ನಿಮಿಷಗಳ ಕಾಲ ಭೇಟಿ ಮಾಡಿದರು.

- Advertisement -

ಇದೇ ವೇಳೆ, ಮುಂಬರುವ 2024 ರ ವಿಧಾನಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದ್ದೇವೆ ಎಂದು ಜನಸೇನಾ ನಾಯಕ ಪವನ್ ಕಲ್ಯಾಣ್ ಘೋಷಣೆ ಮಾಡಿದ್ದಾರೆ.

Join Whatsapp