ಪಾವೂರು ಗ್ರಾಮ ಪಂಚಾಯತ್ : ಕಾಂಗ್ರೆಸ್ ಅಧ್ಯಕ್ಷ, SDPI ಉಪಾಧ್ಯಕ್ಷ

Prasthutha|

ಅದೃಷ್ಟದಾಟದಲ್ಲಿ ಕಾಂಗ್ರೆಸ್‌ಗೆ ಒಲಿದ ಅಧ್ಯಕ್ಷ ಸ್ಥಾನ

- Advertisement -

ಮಂಗಳೂರು : ಉಳ್ಳಾಲ ತಾಲೂಕಿನ ಪಾವೂರು ಗ್ರಾಮ ಪಂಚಾಯತ್’ನ 2ನೇ ಅವಧಿಯ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಒಲಿದಿದೆ. ಉಪಾಧ್ಯಕ್ಷರಾಗಿ SDPI ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಬ್ದುಲ್ ಮಜೀದ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ SDPI ಬೆಂಬಲಿತ ಅಭ್ಯರ್ಥಿ ಮೆಹರುನ್ನಿಸಾ ಬಶೀರ್ ಆಯ್ಕೆಯಾಗಿದ್ದಾರೆ.

- Advertisement -

15 ಮಂದಿ ಸದಸ್ಯ ಬಲದ ಪಾವೂರು ಗ್ರಾಮ ಪಂಚಾಯತ್‌ನಲ್ಲಿ SDPI ಬೆಂಬಲಿತ 06, ಕಾಂಗ್ರೆಸ್ ಬೆಂಬಲಿತ 05, ಬಿಜೆಪಿ ಬೆಂಬಲಿತ 02 ಮತ್ತು ಜೆಡಿಎಸ್ ಬೆಂಬಲಿತ ಇಬ್ಬರು ಸದಸ್ಯರಿದ್ದಾರೆ. ಮೊದಲ ಅವಧಿಯಲ್ಲಿ SDPI ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.

ಇಂದು ನಡೆದ 2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು SDPI ತಲಾ  7 ಮತಗಳನ್ನು ಪಡೆದು ಸಮಬಲ ಸಾಧಿಸಿತ್ತು. ಉಳಿದ ಒಂದು ಮತ ಅಸಿಂಧು ಎಂದು ಘೋಷಿಸಲಾಗಿತ್ತು. ನಂತರ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಸಂಗ ಎದುರಾಯಿತು. ಚೀಟಿಯ ಅದೃಷ್ಟದಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಅಭ್ಯರ್ಥಿಯ ಪಾಲಾಗಿದ್ದು, SDPI ಬೆಂಬಲಿತ ಅಭ್ಯರ್ಥಿಗೆ ಉಪಾಧ್ಯಕ್ಷ ಹುದ್ದೆ ಒಲಿದು ಬಂದಿದೆ.

ಈ ಹಿಂದೆ ಪಾವೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು. ಈ ಹಿಂದಿನ ಪಂಚಾಯತ್ ಚುನಾವಣೆಯಲ್ಲಿ 15ರಲ್ಲಿ 14 ವಾರ್ಡ್‌ಗಳನ್ನು ಕಾಂಗ್ರೆಸ್ ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೋಟೆಗೆ SDPI ಲಗ್ಗೆ ಹಾಕಿತ್ತು.

Join Whatsapp