ಪಾಟ್ನಾ| ಹಾಡಹಗಲೇ ನಡುಬೀದಿಯಲ್ಲಿ ಯುವತಿಗೆ ಗುಂಡೇಟು

Prasthutha|

ಪಾಟ್ನಾ: ವ್ಯಕ್ತಿಯೊಬ್ಬ ನಡುಬೀದಿಯಲ್ಲಿ ಬಾಲಕಿಗೆ ಗುಂಡಿಕ್ಕಿ, ಪರಾರಿಯಾಗಿರುವ ಘಟನೆ ಬಿಹಾರದ ರಾಜಧಾನಿ ಪಾಟ್ನಾದ ಇಂದ್ರಪುರಿ ಪ್ರದೇಶದಲ್ಲಿ ನಡೆದಿದೆ.

- Advertisement -

ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದುಷ್ಕರ್ಮಿ ಬಾಲಕಿಗೆ ಗುಂಡು ಹಾರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 ಆರೋಪಿ ಕೈನಲ್ಲಿ ಬ್ಯಾಗ್ ಹಿಡಿದು ನಿಂತಿರುತ್ತಾನೆ. ಬಾಲಕಿ ರಸ್ತೆ ದಾಟಿ ಬರುತ್ತಿದ್ದಂತೆಯೇ, ಬ್ಯಾಗ್‌ ನಿಂದ ಗನ್ ತೆಗೆದ ಆರೋಪಿ, ಆಕೆಗೆ ಹಿಂದಿನಿಂದ ಕುತ್ತಿಗೆಗೆ ಗುರಿ ಇಟ್ಟು ಗುಂಡು ಹಾರಿಸಿದ್ದಾನೆ. ತಕ್ಷಣ ಬಾಲಕಿ ಕುಸಿದು ಬಿದ್ದಿದ್ದು, ಆರೋಪಿ ಸ್ಥಳದಿಂದ ಕಾಲ್ಕಿತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

ಈ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Join Whatsapp