ಪಾಟಿದಾರ್ ಕೋಟಾ ಪ್ರಕರಣ: ಪೊಲೀಸರ ಬೈಕ್ ಗೆ ಬೆಂಕಿ ಹಚ್ಚಿದ 14 ಆರೋಪಿಗಳನ್ನು ಖುಲಾಸೆಗೊಳಿಸಿದ ಗುಜರಾತ್ ನ್ಯಾಯಾಲಯ

Prasthutha|

ಜಾಮ್‌ ನಗರ: ಆಗಸ್ಟ್ 2015ರ ಪಾಟಿದಾರ್ ಮೀಸಲಾತಿ ಆಂದೋಲನದ ವೇಳೆ ಪೊಲೀಸ್ ಮೋಟಾರ್‌ ಸೈಕಲ್‌ ಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಬಂಧಿಸಿದ್ದ 14 ಜನರನ್ನು ಜಾಮ್‌ ನಗರ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.

- Advertisement -

ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎನ್‌ ಆರ್ ಪಥರ್ ಅವರ ನ್ಯಾಯಾಲಯವು ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಅತುಲ್ ಭಂಡೇರಿ ಸೇರಿದಂತೆ ಎಲ್ಲಾ 14 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸುವಂತೆ ಆದೇಶಿಸಿದೆ ಎಂದು ಅವರ ವಕೀಲ ಹಸ್ಮುಖ್ ಮೊಲಿಯಾ ಹೇಳಿದರು.

ಆಗಸ್ಟ್ 25, 2015 ರಂದು ಅಹಮದಾಬಾದ್‌ ನಲ್ಲಿ ಚಳವಳಿಯ ನಾಯಕ ಹಾರ್ದಿಕ್ ಪಟೇಲ್ ನಡೆಸಿದ ರ‍್ಯಾಲಿಯ ನಂತರ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದಿದ್ದರಿಂದ ನಗರದಲ್ಲಿ ಕರ್ಫ್ಯೂ ವಿಧಿಸಿದಾಗ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ 50 ಜನರ ಗುಂಪಿನಿಂದ 14 ಜನರನ್ನು ಬಂಧಿಸಲಾಗಿತ್ತು.

- Advertisement -

14 ಮಂದಿಯನ್ನು ನಗರ ಎ ವಿಭಾಗದ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ) ಮತ್ತು 435 (ಬೆಂಕಿ ಅಥವಾ ಸ್ಫೋಟಕದಿಂದ ಕಿಡಿಗೇಡಿತನ) ಮತ್ತು ಇತರ ಅಪರಾಧಗಳ ಅಡಿಯಲ್ಲಿ ದಾಖಲಿಸಲಾಗಿತ್ತು ಎಂದು ಮೊಲಿಯಾ ಹೇಳಿದರು.

ಪಾಟಿದಾರ್ ಸಮುದಾಯಕ್ಕೆ ಒಬಿಸಿ ಸ್ಥಾನಮಾನಕ್ಕಾಗಿ ಆಗ್ರಹಿಸಿ ನಡೆದ ಆಂದೋಲನವು ಆಗಸ್ಟ್ 2015 ರಲ್ಲಿ ಹಿಂಸಾಚಾರಕ್ಕೆ ತಿರುಗಿತು, ಇದು 12 ಜನರ ಸಾವಿಗೆ ಕಾರಣವಾಯಿತು ಮತ್ತು ಬೆಂಕಿ ಮತ್ತು ವಿಧ್ವಂಸಕ ಕೃತ್ಯದಿಂದಾಗಿ ಹಲವಾರು ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯಾಯಿತು.



Join Whatsapp