ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನೆ: ವಿದೇಶಾಂಗ ಸಚಿವಾಲಯದ ಸಿಬ್ಬಂದಿ ಅರೆಸ್ಟ್

Prasthutha|

ನವದೆಹಲಿ: ದೇಶದ ರಹಸ್ಯ ಮಾಹಿತಿಗಳನ್ನು ನೆರೆಯ ಪಾಕಿಸ್ತಾನದ ವ್ಯಕ್ತಿಗೆ ರವಾನಿಸಿದ ಆರೋಪದಲ್ಲಿ ವಿದೇಶಾಂಗ ಸಚಿವಾಲಯದ ಚಾಲಕನೊಬ್ಬನನ್ನು ದೆಹಲಿಯ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ ಜೊತೆ ಸಂಬಂಧವಿರಿಸಿದ್ದ ಮಹಿಳೆಯೊಂದಿಗೆ ಈ ಚಾಲಕನಿಗೆ ಸ್ನೇಹ ಬೆಳೆದಿದ್ದು, ದೇಶದ ಸುರಕ್ಷತೆಗೆ ಸಂಬಂಧಪಟ್ಟ ದಾಖಲೆಗಳನ್ನು ಮಹಿಳೆಗೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ತನಿಖೆಯ ಹಿತದೃಷ್ಟಿಯಿಂದ ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಗೊಳಿಸಿಲ್ಲ ಎಂದು ಹೇಳಲಾಗಿದೆ.

ಎಂಇಎ ಚಾಲಕನನ್ನು ಜವಾಹರಲಾಲ್ ನೆಹರು ಭವನದಲ್ಲಿ ಶುಕ್ರವಾರ ಬಂಧಿಸಲಾಗಿದೆ. ಪೂನಂ ಶರ್ಮಾ ಅಥವಾ ಪೂಜಾ ಎಂಬ ಮಹಿಳೆಯ ಸೋಗಿನಲ್ಲಿ ನಟಿಸುತ್ತಾ, ಚಾಲಕನನ್ನು ಬಲೆಗೆ ಹಾಕಿಕೊಂಡಿದ್ದ ಪಾಕಿಸ್ತಾನದ ಬೇಹುಗಾರ್ತಿಗೆ ಹಣದ ಆಸೆಗಾಗಿ ರಹಸ್ಯ ಮಾಹಿತಿ ಹಾಗೂ ದಾಖಲೆಗಳನ್ನು ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿದೆ.

- Advertisement -

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಇನ್ನಷ್ಟು ಉದ್ಯೋಗಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಅನುಮಾನದ ಅನ್ವಯ ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ತನಿಖೆ ನಡೆಸುತ್ತಿವೆ. ಆದರೆ ಈ ಬಗ್ಗೆ ಎಂಇಎ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.



Join Whatsapp