ಮಂಗಳೂರು: ಟೆಲಿಗ್ರಾಂ ಖಾತೆಯಿಂದ ಲಿಂಕ್ ಕಳುಹಿಸಿ ಪಾರ್ಟ್ ಟೈಂ ಉದ್ಯೋಗ ನೀಡುವುದಾಗಿ 5.43 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.29ರಂದು ದೂರುದಾರರಿಗೆ ಸಂದೇಶ ಕಳುಹಿಸಿದ ಅಪರಿಚಿತ ವ್ಯಕ್ತಿ ಅನಂತರ ಟಾಸ್ಕ್ ಗಳನ್ನು ನೀಡಿದ್ದಾನೆ. ಟಾಸ್ಕ್ ಗಳನ್ನು ಪೂರ್ಣಗೊಳಿಸಿದರೆ ಹಣ ನೀಡುವುದಾಗಿ ನಂಬಿಸಿದ್ದಾನೆ. ಮೊದಲ ಟಾಸ್ಕ್ ನಲ್ಲಿ ಹಣ ಹೂಡಿಕೆ ಮಾಡಿಸಿ ಅನಂತರ 1,237 ರೂ.ಗಳನ್ನು ದೂರುದಾರರ ಖಾತೆಗೆ ವರ್ಗಾಯಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಇನ್ನಷ್ಟು ಲಾಭ ಗಳಿಸುವ ಉದ್ದೇಶದಿಂದ ಮುಂದಿನ ಟಾಸ್ಕ್ ಗಳನ್ನು ಮಾಡಿದ್ದಾರೆ. ಅಪರಿಚಿತ ವ್ಯಕ್ತಿ ದೂರುದಾರರ ಖಾತೆಯಿಂದ ಜು. 4ರಿಂದ ಜು. 8ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 5,43,151 ರೂ.ಗಳನ್ನು ಹಣ ವರ್ಗಾಯಿಸಿಕೊಂಡು ಯಾವುದೇ ಹಣ ವಾಪಸ್ ನೀಡದೆ ವಂಚಿಸಿದ್ದಾನೆ.