ಪ್ಯಾರಿಸ್ ಒಲಿಂಪಿಕ್ಸ್: ಶೂಟಿಂಗ್ ನಲ್ಲಿ ಸ್ವಪ್ನಿಲ್ ಗೆ ಕಂಚು; ದೇಶಕ್ಕೆ 3ನೇ ಪದಕ

Prasthutha|

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನ ಪುರುಷರ ಶೂಟಿಂಗ್ ವೈಯಕ್ತಿಕ 50 ಮೀಟರ್ ವಿಭಾಗದ ರೈಫಲ್ 3 ಪೊಸಿಷನ್ ನಲ್ಲಿ ಭಾರತದ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಈ ವರ್ಷ ಗೆದ್ದಿರುವ ಪದಕಗಳ ಸಂಖ್ಯೆ ಮೂರಕ್ಕೆ ಏರಿದೆ.

- Advertisement -

50 ಮೀಟರ್ ರೈಫಲ್ 3 ಪೊಸಿಷನ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನ್ನುವ ಹೆಗ್ಗಲಿಕೆ ಸ್ವಪ್ನಿಲ್ ಪಾಲಾಗಿದೆ.


ಶತೋಹು ಶೂಟಿಂಗ್ ರೇಂಜ್ ನಲ್ಲಿ ಬುಧವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಸ್ವಪ್ನಿಲ್ ಅವರು ಏಳನೇ ಸ್ಥಾನ ಗಳಿಸಿ ಫೈನಲ್ ಪ್ರವೇಶಿಸಿದ್ದರು
8 ಮಂದಿ ಒಳಗೊಂಡಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಕುಸಾಲೆ ಮೂರನೇ ಸ್ಥಾನ ಪಡೆದರು.



Join Whatsapp