ಪರೇಶ್ ಮೇಸ್ತಾ ಸಾವು ಪ್ರಕರಣ | ʼಇದು ಕೊಲೆಯಲ್ಲ, ಆಕಸ್ಮಿಕ ಸಾವು ʼ :- ಸಿ ಬಿ ಐ ವರದಿ

Prasthutha|

ಕಾರವಾರ : ಉತ್ತರ ಕನ್ನಡ  ಜಿಲ್ಲೆಯ ಹೊನ್ನಾವರದಲ್ಲಿ ಕಳೆದ ಐದು ವರ್ಷಗಳ ಹಿಂದೆ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದ  ಪರೇಶ್ ಮೇಸ್ತಾ  ಎಂಬ ಯುವಕನನ್ನು ಯಾರೂ ಕೊಲೆ ಮಾಡಿಲ್ಲ.ಅದು ಆಕಸ್ಮಿಕ ಸಾವು ಎಂದು  ಸಿಬಿಐ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

- Advertisement -

2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಮೀನುಗಾರನಾಗಿದ್ದ  ಯುವಕ ಪರೇಶ್ ಮೇಸ್ತಾ ಕಣ್ಮರೆಯಾಗಿದ್ದು,  ಎರಡು ದಿನದ ಬಳಿಕ ನಗರದ ದೇವಸ್ತಾನವೊಂದರ  ಹಿಂಭಾಗದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ.

ಈ ಯುವಕನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿಗರು ಆರೋಪಿಸಿದ್ದರು. ಮೇಸ್ತಾನನ್ನು ಬಿಜೆಪಿ, ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಐವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಸುದೀರ್ಘ ತನಿಖೆ ನಡೆಸಿ ನಾಲ್ಕೂವರೆ ವರ್ಷದ ನಂತರ ಸಿಬಿಐ, ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

- Advertisement -

ಸಿಬಿಐ ವರದಿಯಲ್ಲಿ, ಪರೇಶ್ ಮೇಸ್ತಾನನ್ನು ಯಾರೂ ಹತ್ಯೆ ನಡೆಸಿಲ್ಲ.. ಇದೊಂದು ಆಕಸ್ಮಿಕ ಸಾವು ಎಂದು ತಿಳಿಸಲಾಗಿದೆ.  ಇಂದು ಸಿಬಿಐ ಸಲ್ಲಿಸಿರುವ ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ, ನವೆಂಬರ್ 16ಕ್ಕೆ ತೀರ್ಪು ಕಾಯ್ದಿರಿಸಿದೆ.



Join Whatsapp