ಪರೇಶ್ ಮೇಸ್ತಾ ಸಾವು; ಕುಟುಂಬದ ಪರ ನಿಲ್ಲುತ್ತೇವೆ ಎಂದ ಸಿ.ಟಿ.ರವಿ

Prasthutha|

ಚಿಕ್ಕಮಗಳೂರು : ನಾವು ಪರೇಶ್ ಮೇಸ್ತಾ ಕುಟುಂಬದ ಪರ ನಿಲ್ಲುತ್ತೇವೆ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೇಶ್ ಮೇಸ್ತಾ ಕುಟುಂಬದವರು ಮೇಲ್ಮನವಿ, ಮರು ತನಿಖೆಗೆ ಬಯಸಿದ್ರೆ ಅವರ ಜೊತೆ ನಿಲ್ಲುತ್ತೇವೆ. ಹಿಂದೆಯೂ ಮೇಸ್ತಾ  ಕುಟುಂಬದ ಪರ ನಿಂತಿದ್ದೆವು. ಇನ್ನು ಮುಂದಕ್ಕೂ ನಿಲ್ಲುತ್ತೇವೆ ಎಂದು ಹೇಳಿದರು.

ಗಣಪತಿ ಲೈವ್ ಸ್ಟೇಟ್ಮೆಂಟ್ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ರು. ಲೈವ್ ಸ್ಪೇಟ್ಮೆಂಟ್ ನ ಡೆತ್ ಸ್ಟೇಟ್ಮೆಂಟ್ ಎಂದು ಪರಿಗಣನೆ ಮಾಡ್ತಾರೆ. ಆದರೆ ಆ ಸ್ಟೇಟ್ಮೆಂಟ್ ಗೂ ಸಿಬಿಐ ಬಿ ರಿಪೋರ್ಟ್ ಕೊಟ್ಟಿದೆ. ಎಷ್ಟೋ ಪ್ರಕರಣಗಳು ರೀ ಓಪನ್ ಆಗಿ ಹತ್ತಾರು ವರ್ಷಗಳ ಬಳಿಕ ಶಿಕ್ಷೆಯಾಗಿದೆ ಎಂದು ಹೇಳಿದರು.

- Advertisement -

ಸಿದ್ದರಾಮಯ್ಯ ಅವರು ವಕೀಲರು. ಅವರಿಗೆ ಇದೆಲ್ಲಾ ಗೊತ್ತಿದೆ ಎಂದು ಭಾವಿಸುತ್ತೇನೆ. ಸಿದ್ದರಾಮಯ್ಯ ತನ್ನೆಲ್ಲಾ ಪಾಪದಿಂದ ಮುಕ್ತನಾಗಿದ್ದೇನೆ ಎಂದು ಭಾವಿಸುವುದು ಬೇಡ. ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವವರಿಗೆ ಸುಳ್ಳಿನ ತಲೆ ಮೇಲೆ ಹೊಡೆದಂಗೆ ಹೇಳೋಕೂ ಬರುತ್ತೆ . 55-60 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಬೇರು-ಬಾಹು ಎಲ್ಲೆಲ್ಲಿ ಇದೆಯೋ..? ಕಾಂಗ್ರೆಸ್ ನ ಪ್ರಭಾವ ವಲಯ ಎಲ್ಲೆಲ್ಲಿದೆಯೋ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

Join Whatsapp