ಪೋಷಕರು, ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಓದಿನ ಕಡೆಗೆ ಆಸಕ್ತಿ ಮೂಡಿಸಲು ಶ್ರಮಿಸಬೇಕು: ತನ್ವೀರ್

Prasthutha|

ಮಡಿಕೇರಿ: ನಾಪೋಕ್ಲು ಸಮೀಪದ ಹೊದವಾಡ ರಾಫಲ್ಸ್ ವಿಧ್ಯಾಸಂಸ್ಥೆಯಲ್ಲಿ ಪೋಷಕರ ಹಾಗೂ ಅಧ್ಯಾಪಕರ ಸಭೆಯನ್ನು ನಡೆಸಲಾಯಿತು.

- Advertisement -


ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ತನ್ವೀರ್, ಕೋವಿಡ್ನಿಂದಾಗಿ ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ಇಲ್ಲದಾಗಿದ್ದು, ಪೋಷಕರು ಹಾಗೂ ಅಧ್ಯಾಪಕರು ಸಮಾನ ಜವಾಬ್ದಾರಿಯನ್ನು ತೆಗೆದು ವಿದ್ಯಾರ್ಥಿಗಳಲ್ಲಿ ಓದಿನ ಕಡೆಗೆ ಆಸಕ್ತಿ ಮೂಡಿಸಲು ಶ್ರಮಿಸಬೇಕು ಎಂದರು.


ಪಿಯು ಮಂಡಳಿಯ ಪ್ರಥಮ ಹಾಗೂ ದ್ವೀತಿಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳು ಪಾಠ ಪ್ರವಚನದ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದರು.

- Advertisement -


ವೇದಿಕೆಯಲ್ಲಿ ಪೋಷಕ ಅಧ್ಯಾಪಕರ ಸಂಘದ ಉಪಧ್ಯಕ್ಷರಾದ ನೌಷಾದ್, ಉಪನ್ಯಾಸಕರಾದ ರೇಖಾ ಕೆ.ಯು ಹಾಗೂ ಪೂಜಶ್ರೀ ಹಾಜರಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುನೈನ ನಿರೂಪಿಸಿದರು. ಅಫ್ರೀನಾ ಸ್ವಾಗತಿಸಿ, ಕೀರ್ತಿ ವಂದಿಸಿದರು.

Join Whatsapp