ಪುತ್ರಿಯ ಮದುವೆ ನಡೆದಿದ್ದ ಫೈವ್‌ ಸ್ಟಾರ್‌ ಹೊಟೇಲ್‌ನಲ್ಲೇ ಹೆತ್ತವರ ಆತ್ಮಹತ್ಯೆ

Prasthutha|

ತಿರುವನಂತಪುರ: ಕೇರಳದ ತಿರುವನಂತಪುರದ ಫೈವ್‌ ಸ್ಟಾರ್‌ ಹೊಟೇಲ್‌ ಒಂದರಲ್ಲಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದ ಅಲೆಪ್ಪಿ ಜಿಲ್ಲೆಯ ಹರಿಪದ್‌ ತಾಲೂಕಿನ ಚೆಪ್ಪಡ್‌ ಗ್ರಾಮದ ಸುಗತನ್‌(70) ಮತ್ತು ಅವರ ಪತ್ನಿ ಸುನಿಯಾ ಸುಗತನ್‌(60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

ಕಳೆದ ಹಲವು ತಿಂಗಳಿನಿಂದ ದಂಪತಿ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರು ಎನ್ನಲಾಗಿದೆ. 5 ದಿನಗಳ ಹಿಂದೆ ದಂಪತಿ ಹೊಟೇಲ್‌ಗೆ ಆಗಮಿಸಿದ್ದರು. ಅಲ್ಲದೆ ಕಳೆದ ವರ್ಷ ಇದೇ ಹೊಟೇಲ್‌ನಲ್ಲಿ ದಂಪತಿ ತಮ್ಮ ಪುತ್ರಿಯ ವಿವಾಹ ನೆರವೇರಿಸಿದ್ದರು. ಗುರುವಾರ ಸಂಜೆ ಕೊಠಡಿಯ ಬಾಗಿಲು ತೆರೆಯಲಿಲ್ಲ. ಪೊಲೀಸರ ಉಪಸ್ಥಿತಿಯಲ್ಲಿ ಬಾಗಿಲು ತೆರೆದಾಗ, ದಂಪತಿ ಶವಗಳು ಪತ್ತೆಯಾಗಿದೆ. ಡೆತ್‌ ನೋಟ್‌ ಕೂಡ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp